ADVERTISEMENT

ಬಿಳಿಕೆರೆ: ಬೋನಿಗೆ ಬಿದ್ದ ಗಂಡು ಚಿರತೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 1:48 IST
Last Updated 4 ನವೆಂಬರ್ 2020, 1:48 IST
ಬಿಳಿಕೆರೆ ಹೋಬಳಿಯ ತೆಂಕಲಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಚಿರತೆ ಬೋನಿಗೆ ಬಿದ್ದಿರುವುದು
ಬಿಳಿಕೆರೆ ಹೋಬಳಿಯ ತೆಂಕಲಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಚಿರತೆ ಬೋನಿಗೆ ಬಿದ್ದಿರುವುದು   

ಬಿಳಿಕೆರೆ: ಹೋಬಳಿಯ ತೆಂಕಲಕೊಪ್ಪಲು ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಹೋಬಳಿಯ ತೆಂಕಲಕೊಪ್ಪಲು, ಮೈದನಹಳ್ಳಿ, ಗೆರಸನಹಳ್ಳಿ ಮೊದಲಾದ ಗ್ರಾಮಗಳ ಸುತ್ತಮುತ್ತ ಚಿರತೆ ಓಡಾಡುತ್ತಿದೆ ಎಂದು ರೈತರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಹಿಡಿಯಲು 5 ದಿನದ ಹಿಂದೆ ತೆಂಕಲಕೊಪ್ಪಲು ಗ್ರಾಮದ ಮಹೇಶ್ ಟಿ.ಎಸ್ ರವರ ಜಮೀನಿನಲ್ಲಿ ಬೋನ್ ಇಟ್ಟಿದ್ದರು.

ಸುಮಾರು 3 ರಿಂದ 4 ವರ್ಷದ ಚಿರತೆ ಇದಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಲಯ ಅರಣ್ಯಾಧಿಕಾರಿ ಸಂದೀಪ್ ಮೇಲಧಿಕಾರಿಗಳ ನಿರ್ದೇಶನದಂತೆ ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಗುವುದು ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.