ADVERTISEMENT

ಅಪಘಾತದಲ್ಲಿ ಮಿದುಳು ನಿಷ್ಕ್ರಿಯ: 8 ಮಂದಿಗೆ ಜೀವದಾನ ಮಾಡಿದ ಲೋಹಿತ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 5:00 IST
Last Updated 1 ಅಕ್ಟೋಬರ್ 2022, 5:00 IST
ಲೋಹಿತ್‌
ಲೋಹಿತ್‌   

ಮೈಸೂರು: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ಮಿದುಳು ನಿಷ್ಕ್ರಿಯಕ್ಕೊಳಗಾಗಿದ್ದ ಲೋಹಿತ್ (31) ಎಂಟು ಮಂದಿಗೆ ಜೀವದಾನ ಮಾಡಿದ್ದಾರೆ.

ಸೆ.27ರಂದು ಹುಣಸೂರಿನ ಬಿಳಿಕೆರೆ ಬಳಿ ಲೋಹಿತ್‌ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಬೃಂದಾವನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳವಾರ ನಗರದ ಬಿಜಿಎಸ್‌ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಸೆ.29ರ ರಾತ್ರಿ 12.50ರ ಸುಮಾರಿಗೆ ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ಎಂದು ವೈದ್ಯರು ತಿಳಿಸಿದ್ದರು.

ಅಂಗಾಂಗ ದಾನದ ಕುರಿತು ಕುಟುಂಬಸ್ಥರಿಗೆ ವೈದ್ಯರು ಮಾಹಿತಿ ನೀಡಲಾಯಿತು. ಇದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು. ಸರ್ಕಾರದ ‘ಜೀವ ಸಾರ್ಥಕತೆ’ಯ ಅಧಿಕಾರಿಗಳ ಅನುಮತಿ ಪ‍ಡೆದು, ಮಧ್ಯಾಹ್ನ 12.30ಕ್ಕೆ ಬಿಜಿಎಸ್‌ ಆಸ್ಪತ್ರೆಯಲ್ಲಿಯೇ 2 ಮೂತ್ರಪಿಂಡಗಳು, ಮೇದೋಜೀರಕ ಗ್ರಂಥಿ, ಯಕೃತ್‌ ಅನ್ನು ಕಸಿ ಮಾಡಲಾಯಿತು. ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯ, ಕಾರ್ನಿಯಾವನ್ನು ಕೆ.ಆರ್‌.ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

ADVERTISEMENT

ಹೃದಯವನ್ನು ಬೆಂಗಳೂರಿಗೆ ಕಳುಹಿಸಲು ಮೈಸೂರು ನಗರ ಸಂಚಾರ ಪೊಲೀಸರು ‘ಗ್ರೀನ್‌ ಕಾರಿಡಾರ್‌’ ವ್ಯವಸ್ಥೆ ಕಲ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.