ADVERTISEMENT

ನಮ್ಮ ಬಗ್ಗೆ ಹಗುರ ಮಾತು ಬೇಡ: ಸಂಸದ ಪ್ರತಾಪ ಸಿಂಹಗೆ ಹರ್ಷವರ್ಧನ್‌ ತಿರುಗೇಟು

ಸಂಸದ ಪ್ರತಾಪ ಸಿಂಹಗೆ ಹರ್ಷವರ್ಧನ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 2:31 IST
Last Updated 22 ಅಕ್ಟೋಬರ್ 2020, 2:31 IST
ಹರ್ಷವರ್ಧನ್‌
ಹರ್ಷವರ್ಧನ್‌   

ಮೈಸೂರು: ‘ಯಾವ ವಿಚಾರಕ್ಕೆ ಲಡಾಯಿ ಮಾಡಬೇಕು, ಮಾಡಬಾರದು ಎಂಬುದರ ಅರಿವು ನಮಗೆ ಇದೆ. ನನಗೆ ಲಡಾಯಿ ರಾಜಕೀಯ ಮಾಡಲು ಬರಲ್ಲ. ಅದು ನನ್ನ ಸಂಸ್ಕಾರವೂ ಅಲ್ಲ. ನನ್ನ ಕ್ಷೇತ್ರದ ಜನರ ಬಗ್ಗೆ ಹಗುರವಾಗಿ ಮಾತನಾಡಬೇಡಿ’ ಎಂದು ನಂಜನಗೂಡು ಶಾಸಕ ಹರ್ಷವರ್ಧನ್‌ ಅವರು ಸಂಸದ ಪ್ರತಾಪ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

ಬುಧವಾರ ಮಾಧ್ಯಮದವರ ಜತೆ ಮಾತನಾಡಿ, ‘ಸಂಸದರು ಇತ್ತೀಚೆಗೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ ಸಮಿತಿ) ಸಭೆ ಮಾಡಿದ್ದರು. ಅಲ್ಲಿ ನಂಜನಗೂಡಿಗೆ ಸಂಬಂಧಿಸಿದಂತೆ ಆಡಿದ ಮಾತುಗಳು ನೋವುಂಟು ಮಾಡಿದೆ’ ಎಂದು ಅವರು ಹೇಳಿದರು.

‘ನಂಜನಗೂಡಿನಲ್ಲಿ ಪಂಚಾಯಿತಿ ಕಟ್ಟಡಗಳು ಏಕೆ ನಿರ್ಮಾಣ ಆಗುತ್ತಿಲ್ಲ ಎಂದು ನೀವು ಸಭೆ ಯಲ್ಲಿ ಕೇಳಿದ್ದೀರಿ. ಅದಕ್ಕೆ ಇಒ ಅವರು 17 ಕಟ್ಟಡಗಳು ನಿರ್ಮಾಣ ಆಗಿದ್ದು, ಕೆಲವು ಕಡೆ ಜಾಗದ ಸಮಸ್ಯೆ ಇದೆ ಎಂದು ಉತ್ತರಿ ಸಿದ್ದರು. ಆಗ ನೀವು ‘ನಂಜನಗೂಡಿನ ಜನರು ಯಾವುದೇ ವಿಚಾರದಲ್ಲೂ ಲಡಾಯಿಗೆ ಮುಂದಾಗುವರು. ಈ ವಿಚಾರದಲ್ಲಿ ಏಕೆ ಹಿಂದೆ’ ಎಂದು ಕೇಳಿದ್ದೀರಿ. ಅಂದರೆ ಪ್ರತಿ ಗ್ರಾಮಕ್ಕೆ ತೆರಳಿ ಜಗಳ ಮಾಡಿ ನಾನು ಜಾಗ ಕೊಡಿಸಬೇಕಾ’ ಎಂದು ಪ್ರಶ್ನಿಸಿದರು.

ADVERTISEMENT

‘ಜುಬಿಲೆಂಟ್‌ ಕಂಪನಿ ಕೊರೊನಾ ದಿಂದ ಸಂಕಷ್ಟಕ್ಕೀಡಾ ದವರಿಗೆ ನೀಡಿದ್ದ ಕಿಟ್‌ಗಳ ವಿತರಣೆಸರಿಯಾಗಿ ಆಗಿಲ್ಲ ಎಂಬ
ವಿಷಯವನ್ನೂ ಸಭೆಯಲ್ಲಿ ಪ್ರಸ್ತಾಪಿಸಿದ್ದೀರಿ. ಕಂಪನಿ ಎಷ್ಟು ಕಿಟ್‌ ಕೊಟ್ಟಿದೆ, ಅದನ್ನು ಎಲ್ಲಿ ವಿತರಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಸರಿಯಾದ ಮಾಹಿತಿ ಇಲ್ಲದೆ ಆರೋಪಗಳನ್ನು ಮಾಡಬೇಡಿ’ ಎಂದು ಪ್ರತ್ಯುತ್ತರ ಕೊಟ್ಟರು.

‘ದಿಶಾ ಸಮಿತಿ ಸಭೆಯಲ್ಲಿ ನೀವು ಆಡಿದ ಮಾತುಗಳು ಬೇಸರ ಉಂಟುಮಾಡಿದೆ. ನಂಜನಗೂಡಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಹಸ್ತಕ್ಷೇಪ ಬೇಡ. ನೀವು ಇನ್ನು ಮುಂದೆಯೂ ಇದೇ ರೀತಿ ಏನಾದರೂ ಹೇಳಿದರೆ ಅದಕ್ಕೆ ಚಾಮರಾಜನಗರದ ಸಂಸದ ಶ್ರೀನಿವಾಸಪ್ರಸಾದ್‌ ಅವರೇ ಉತ್ತರಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.