ADVERTISEMENT

ರೆಸಾರ್ಟ್ ಮಾಲೀಕರಿಗೆ ಪೊಲೀಸರಿಂದ ಬೆದರಿಕೆ: ಎಸ್‌ಪಿಗೆ ಎಚ್ಚರಿಕೆ ನೀಡಿದ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 12:36 IST
Last Updated 24 ನವೆಂಬರ್ 2020, 12:36 IST
ಸಚಿವ  ಸೋಮಶೇಖರ್ (ಸಂಗ್ರಹ ಚಿತ್ರ)
ಸಚಿವ ಸೋಮಶೇಖರ್ (ಸಂಗ್ರಹ ಚಿತ್ರ)   

ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನ ಬದನಕುಪ್ಪೆ ಗ್ರಾಮದಲ್ಲಿರುವ ರೆಡ್‌ ಅರ್ಥ್ ರೆಸಾರ್ಟ್ ಮಾಲೀಕರಿಗೆ ಆಯುಧಪೂಜೆಯ ‘ರೋಲ್‌ಕಾಲ್‌’ ಕೊಟ್ಟಿಲ್ಲ ಎಂದು ಪೊಲೀಸರು ಬೆದರಿಕೆ ಒಡ್ಡಿರುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ರೆಸಾರ್ಟ್‌ನಲ್ಲಿ ತಂಗಿದ್ದವರ ವಸ್ತುಗಳು ಕಳ್ಳತನವಾದವು ಎಂದು ಹೇಳಿ ಮಾಲೀಕರನ್ನು ಹೊರಹೋಗಲು ಬಿಟ್ಟಿಲ್ಲ. ನಾನು ಫೋನ್ ಮಾಡಿದ ನಂತರವೂ ಅವರನ್ನು ಬಿಡದೇ ಹೋದರೆ ಹೇಗೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಅವರನ್ನು ತರಾಟೆಗೆ ತೆಗೆದುಕೊಂಡರು.

‘ರೆಸಾರ್ಟ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ. ಅದನ್ನು ಬಿಟ್ಟು ಸ್ಥಳೀಯ ಪೊಲೀಸರು ರೋಲ್‌ಕಾಲ್‌ ವಸೂಲು ಮಾಡುವುದು ಸರಿಯಲ್ಲ. ಕಳೆದ ಏಳೆಂಟು ತಿಂಗಳುಗಳಿಂದ ಅವರಿಗೂ ವ್ಯವಹಾರ ಇಲ್ಲ. ಅವರಾದರೂ ರೋಲ್‌ಕಾಲ್ ಹೇಗೆ ಕೊಡಬೇಕು. ಸಿಪಿಐ ಹಾಗೂ ಸಬ್‌ಇನ್‌ಸ್ಪೆಕ್ಟರ್ ಮೇಲೆ ಕ್ರಮ ಕೈಗೊಳ್ಳಿ. ನಿಮಗೆ ಇರುವ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ’ ಎಂದು ಹರಿಹಾಯ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.