ಮೈಸೂರು: ಈ ಬಾರಿಯ ದಸರಾ ಮಹೋತ್ಸವ ಅಂಗವಾಗಿ ಚಲನಚಿತ್ರೋತ್ಸವ ಉಪ ಸಮಿತಿಯಿಂದ ಕಿರುಚಿತ್ರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ‘ಕಿರುಚಿತ್ರ ಸ್ಪರ್ಧೆ’ ಹಮ್ಮಿಕೊಳ್ಳಲಾಗಿದೆ.
2024ರ ನ.1ರಿಂದ ಈ ವರ್ಷದ ಆ.25ರೊಳಗೆ ನಿರ್ಮಾಣವಾಗಿರುವ, 10 ನಿಮಿಷಗಳ ಅವಧಿಗೆ ಸೀಮಿತವಾದ (ಕಿರುಚಿತ್ರ ಒಳಗೊಂಡಂತೆ) ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದು.
ಅತ್ಯುತ್ತಮವಾದ ಮೊದಲ ಮೂರು ಕಿರುಚಿತ್ರಗಳಿಗೆ ನಗದು ಬಹುಮಾನ, ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಲಾಗುವುದು. ಯಾವುದೇ ಆನ್‌ಲೈನ್ ಮಾಧ್ಯಮದಲ್ಲಿ ಬಿಡುಗಡೆ ಆಗಿರಬಾರದು. ಗೂಗಲ್
ಡ್ರೈವ್‌ನಲ್ಲಿ ಅಪ್‌ಲೋಡ್ ಮಾಡಿ ಆ ಲಿಂಕ್ ಅರ್ಜಿಯಲ್ಲಿ ನಮೂದಿಸಬೇಕು. ಯಾವುದೇ ಭಾಷೆಯ ಕಿರುಚಿತ್ರವನ್ನೂ ಸ್ಪರ್ಧೆಗೆ ಸಲ್ಲಿಸಬಹುದು.
ವಿಜೇತ, ಅತ್ಯತ್ತಮ ಕಿರುಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುವುದು. ಉಪಶೀರ್ಷಿಕೆ ಕಡ್ಡಾಯ. ಅತ್ಯುತ್ತಮ ಸಂಕಲನ ಹಾಗೂ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ನೀಡಲಾಗುವುದು. ಆ.26ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊ.ಸಂ. 74115 64510 (ಶ್ರೇಯಸ್) ಸಂಪರ್ಕಿಸಬಹುದು ಎಂದು ಉಪಸಮಿತಿಯ ಕಾರ್ಯದರ್ಶಿ ಹರೀಶ್ ಟಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.