ADVERTISEMENT

ಮೈಸೂರು: ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 14:19 IST
Last Updated 4 ಜುಲೈ 2025, 14:19 IST
<div class="paragraphs"><p>ಹೃದಯಾಘಾತ</p></div>

ಹೃದಯಾಘಾತ

   

ಮೈಸೂರು: ಇಲ್ಲಿನ ವಿಜಯನಗರ ಮೊದಲನೇ ಹಂತದ ಜಿಮ್‌ ಒಂದರಲ್ಲಿ ಈಚೆಗೆ ವ್ಯಕ್ತಿಯೊಬ್ಬರು ವ್ಯಾಯಾಮ ಮಾಡುತ್ತಿದ್ದಾಗ ಹೃದಯಾಘಾತದಿಂದ
ಮೃತಪಟ್ಟರು.

ಗೋಕುಲಂ ನಿವಾಸಿ ಬಿ.ಎನ್‌.ಶ್ರೀಧರ್‌ (51) ಮೃತರು. ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಜುಂಜನಹಳ್ಳಿ ಗ್ರಾಮದವರಾದ ಅವರು, ನಗರದಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

ADVERTISEMENT

ಶನಿವಾರ ಜಿಮ್‌ನಲ್ಲಿ ಥ್ರೆಡ್‌ ಮಿಲ್‌ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಕುಸಿದು ಬಿದ್ದಿದ್ದು, ನಂತರ
ಮೃತಪಟ್ಟಿದ್ದಾರೆ.

‘ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ಅದಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯೂ ಆಗಿತ್ತು. ಹುಟ್ಟೂರು ಹಾಸನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು’ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.