ADVERTISEMENT

ಮೈಸೂರು ವಕೀಲರ ಸಂಘ: ಪದಾಧಿಕಾರಿಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2018, 20:27 IST
Last Updated 18 ನವೆಂಬರ್ 2018, 20:27 IST

ಮೈಸೂರು: ಮೈಸೂರು ವಕೀಲರ ಸಂಘಕ್ಕೆ ನ್ಯಾಯಾಲಯ ಆವರಣದಲ್ಲಿ ಭಾನುವಾರ ನಡೆದ 2018–20ನೇ ಸಾಲಿನ ಆಡಳಿತ ಮಂಡಳಿ ಚುನಾವಣೆಯಲ್ಲಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಎಸ್‌.ಆನಂದಕುಮಾರ್, ಉಪಾಧ್ಯಕ್ಷರಾಗಿ ಎಸ್‌.ಜಿ.ಶಿವಣ್ಣೇಗೌಡ, ಕಾರ್ಯದರ್ಶಿಯಾಗಿ ಬಿ.ಶಿವಣ್ಣ , ಜಂಟಿ ಕಾರ್ಯದರ್ಶಿಯಾಗಿ ಸಿ.ಕೆ.ರುದ್ರಮೂರ್ತಿ, ಮಹಿಳಾ ಜಂಟಿ ಕಾರ್ಯದರ್ಶಿಯಾಗಿ ಎಂ.ಮನೋನ್ಮಣಿ, ಖಜಾಂಚಿಯಾಗಿ ಜಿ.ಪಿ.ಚಂದ್ರಶೇಖರ್ ಚುನಾಯಿತರಾದರು.

ಹಿರಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಆರ್.ಭಾಸ್ಕರ ಆರಾಧ್ಯ, ಅನಿತಾ.ಎ.ಜೋಷಿ, ಟಿ.ಸೀನಾ, ಶಂಕರ್ ಸಿಂಗ್, ಆರ್‌.ಲಕ್ಷ್ಮಣರಾಜ್, ಕಿರಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಆರ್‌.ಚರಣರಾಜ್, ಎಂ.ಇ.ಸುನೀಲ್ ಕುಮಾರ್, ಬಿ.ಎಂ.ಶಂಭುಲಿಂಗಸ್ವಾಮಿ, ಎಂ.ಅಮೃತರಾಜ್, ಕೆ.ಚಂದ್ರಶೇಖರ್ ಆಯ್ಕೆಯಾದರು.

ADVERTISEMENT

ಒಟ್ಟು 16 ಹುದ್ದೆಗಳಿಗೆ 41 ಮಂದಿ ಸ್ಪರ್ಧಿಸಿದ್ದರು. 2,244 ಸದಸ್ಯರು ಮತ ಚಲಾಯಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಎಂ.ಆರ್.ಆನಂದ, ಎಸ್.ಆನಂದಕುಮಾರ್, ಬಿ.ಎಸ್.ಪ್ರಶಾಂತ್, ವಿ.ಶಾರದಾ, ಕೆ.ಟಿ.ಸುರೇಶ್, ಉ‍ಪಾಧ್ಯಕ್ಷ ಸ್ಥಾನಕ್ಕೆ ಕೆ.ಎಂ.ದೊರೆಸ್ವಾಮಿ, ಎಚ್.ಬಸವರಾಜಪ‍್ಪ‍, ಡಿ.ಮಂಜುನಾಥ, ಎಸ್.ಎಸ್.ವೈದ್ಯನಾಥ, ಎಸ್.ಜಿ.ಶಿವಣ್ಣೇಗೌಡ,‌ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಉಮೇಶ್, ಎಚ್.ಕೆ.ಕೃಷ್ಣ, ಬಿ.ಶಿವಣ್ಣ, ಎ.ಜಿ.ಸುಧೀರ್, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಸ್.ಆರ್.ಗೋಪಾಲೇಗೌಡ, ಸಿ.ಕೆ.ರುದ್ರಮೂರ್ತಿ, ಜಂಟಿ ಕಾರ್ಯದರ್ಶಿ ಮಹಿಳಾ ಮೀಸಲು ಸ್ಥಾನಕ್ಕೆ ಉಮಾದೇವಿ, ಎಂ.ಮನೋನ್ಮಣಿ ಹಾಗೂ ಕೆ.ಎಸ್.ಸವಿತಾ, ಖಜಾಂಜಿ ಸ್ಥಾನಕ್ಕೆ ಜೆ.ಪಿ.ಚಂದ್ರಶೇಖರ್, ಎಚ್.ಎಸ್.ಮಹದೇವಸ್ವಾಮಿ ಹಾಗೂ ಎಂ.ಎಸ್.ಶರತ್ ನಡುವೆ ಬಿರುಸಿನ ಸ್ಪರ್ಧೆ ನಡೆಯಿತು.

ಸಹಕಾರ ಇಲಾಖೆಯ ಅಧಿಕಾರಿ ಹರೀಶ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಒಟ್ಟು 7 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಿತು. ಈ ಹಿಂದಿನ ಸಾಲಿನ ಅಧ್ಯಕ್ಷರಾಗಿ ರಾಮಮೂರ್ತಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.