ADVERTISEMENT

ಜಯಲಕ್ಷ್ಮೀವಿಲಾಸ ಅರಮನೆ ಸಂರಕ್ಷಣೆ ಕಾಮಗಾರಿ ಚುರುಕು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 16:41 IST
Last Updated 12 ಡಿಸೆಂಬರ್ 2024, 16:41 IST
ಮೈಸೂರಿನ ಮಾನಸಗಂಗೋತ್ರಿಯ ಜಯಲಕ್ಷ್ಮೀವಿಲಾಸ ಅರಮನೆ ಮತ್ತು ಜಾನಪದ ವಸ್ತುಸಂಗ್ರಹಾಲಯದ ಸಂರಕ್ಷಣೆ ಕಾರ್ಯವನ್ನು ಯುಎಸ್ ಕಾನ್ಸುಲೇಟ್‌ನ ಪಬ್ಲಿಕ್ ಡಿಪ್ಲಮಸಿ ಅಫೇರ್ಸ್‌ ರಾಯಭಾರಿ ಜಿಯಾನ್ ಬ್ರಿಗಾಂಟಿ ಗುರುವಾರ ವೀಕ್ಷಿಸಿದರು
ಮೈಸೂರಿನ ಮಾನಸಗಂಗೋತ್ರಿಯ ಜಯಲಕ್ಷ್ಮೀವಿಲಾಸ ಅರಮನೆ ಮತ್ತು ಜಾನಪದ ವಸ್ತುಸಂಗ್ರಹಾಲಯದ ಸಂರಕ್ಷಣೆ ಕಾರ್ಯವನ್ನು ಯುಎಸ್ ಕಾನ್ಸುಲೇಟ್‌ನ ಪಬ್ಲಿಕ್ ಡಿಪ್ಲಮಸಿ ಅಫೇರ್ಸ್‌ ರಾಯಭಾರಿ ಜಿಯಾನ್ ಬ್ರಿಗಾಂಟಿ ಗುರುವಾರ ವೀಕ್ಷಿಸಿದರು   

ಮೈಸೂರು: ಇಲ್ಲಿನ ಮಾನಸಗಂಗೋತ್ರಿಯಲ್ಲಿರುವ ಜಯಲಕ್ಷ್ಮೀವಿಲಾಸ ಅರಮನೆ ಮತ್ತು ಜಾನಪದ ವಸ್ತುಸಂಗ್ರಹಾಲಯದ ಸಂರಕ್ಷಣೆ ಕೈಗೊಂಡಿರುವ ‘ಡೆಕ್ಕನ್ ಹೆರಿಟೇಜ್ ಫೌಂಡೇಷನ್ ಆಫ್ ಇಂಡಿಯಾ’ ಮತ್ತು ಅಮೆರಿಕ ರಾಯಭಾರಿ ಕಚೇರಿ ಪ್ರತಿನಿಧಿಗಳು ಗುರುವಾರ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿದರು.

ಡೆಕ್ಕನ್ ಹೆರಿಟೇಜ್ ಸಂಸ್ಥೆಯು ₹33 ಕೋಟಿ ವೆಚ್ಚದಲ್ಲಿ ಸಂರಕ್ಷಣಾ ಕಾರ್ಯ ಕೈಗೊಂಡಿದೆ. ಕಟ್ಟಡದ ಪಶ್ಚಿಮ ಭಾಗಕ್ಕೆ ಯುಎಸ್ ಕಾನ್ಸುಲೇಟ್ ₹2.4 ಕೋಟಿ ನೀಡಿದೆ. 2025ರ ಡಿಸೆಂಬರ್‌ಗೆ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ಯುಎಸ್ ಕಾನ್ಸುಲೇಟ್‌ನ ಪಬ್ಲಿಕ್ ಡಿಪ್ಲಮಸಿ ಅಫೇರ್ಸ್‌ ರಾಯಭಾರಿ ಜಿಯಾನ್ ಬ್ರಿಗಾಂಟಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜ್ ಮಾತನಾಡಿ, ‘ನಮಗೆ ಸಂರಕ್ಷಣಾ ಕಾರ್ಯದ ಸಮಯದಲ್ಲಿ ಕೆಲಸಗಾರರ ಸಮಸ್ಯೆ ಎದುರಾಗಿದ್ದು ಹೊರತುಪಡಿಸಿದರೆ ಬೇರೆ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಮೈಸೂರು ವಿವಿಯು ಪೂರ್ಣ ಪ್ರಮಾಣದ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ಹೆಚ್ಚು ನೆರವಾಗಲಿದೆ’ ಎಂದರು.

ADVERTISEMENT

ಜಯಲಕ್ಷ್ಮೀವಿಲಾಸದ ಮೇಲುಸ್ತುವಾರಿ ಗುರುಸಿದ್ದಯ್ಯ, ಎಂಜಿನಿಯರ್ ಅಖಿಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.