ADVERTISEMENT

ಮೈಸೂರು | ಗಾಂಜಾ ಸೇವನೆ: 23 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 5:22 IST
Last Updated 1 ಆಗಸ್ಟ್ 2025, 5:22 IST
ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಚಾಮುಂಡಿ ಕಮಾಂಡೋ ಪಡೆಯ ಸಿಬ್ಬಂದಿ ಪರಿಶೀಲನೆ ನಡೆಸಿದರು
ಮೈಸೂರಿನ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಚಾಮುಂಡಿ ಕಮಾಂಡೋ ಪಡೆಯ ಸಿಬ್ಬಂದಿ ಪರಿಶೀಲನೆ ನಡೆಸಿದರು   

ಮೈಸೂರು: ನಗರದಲ್ಲಿ ಮಾದಕವಸ್ತು ತಯಾರಿಕೆ ಘಟಕ ಪತ್ತೆ ಪ್ರಕರಣ ಬಳಿಕ ಮಾದಕ ವ್ಯಸನಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ನಾಲ್ಕನೇ ದಿನವಾದ ಬುಧವಾರ ಗಾಂಜಾ ಸೇವಿಸಿದ್ದವರ ವಿರುದ್ಧ 23 ಪ್ರಕರಣ ದಾಖಲಿಸಿದ್ದಾರೆ.

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ನೇತೃತ್ವದಲ್ಲಿ ಪೊಲೀಸರ ತಂಡವು ಉದಯಗಿರಿ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು. ಚಾಮುಂಡಿ ಕಮಾಂಡೋ ಪಡೆಯ ಸಿಬ್ಬಂದಿಗಳು ಪಿಜಿ, ಲಾಡ್ಜ್‌, ಅಂಗಡಿ, ಮೆಡಿಕಲ್‌, ವಾಹನ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆ ನಡೆಸಿದರು.

123 ಜನರ ಪರೀಕ್ಷೆಗೊಳಪಡಿಸಿದರು. ಮೂವರು ಪೆಡ್ಲರ್‌ಗಳನ್ನು ಬಂಧಿಸಿ, 967 ಗ್ರಾಂ ಗಾಂಜಾ ಹಾಗೂ ಐದು ಗ್ರಾಂ ಎಂಡಿಎಂಎ ವಶಕ್ಕೆ ಪಡೆದರು. ಗಾಂಜಾ ಮಾರಾಟ ಮಾಡಿದ್ದ 13 ಆರೋಪಿಗಳ ಮನೆ ಪರಿಶೀಲಿಸಿದರು.

ADVERTISEMENT

ಜಯಲಕ್ಷ್ಮಿಪುರಂ ಠಾಣಾ ಪೊಲೀಸರು ಕಾಲ್ನಡಿಗೆ ಜಾಥಾ ಮಾಡಿ ವಿವಿಧೆಡೆ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.