ADVERTISEMENT

ನಂಜನಗೂಡು: ಶೇ 76ರಷ್ಟು ಮತದಾನ

11 ಕಡೆಗಳಲ್ಲಿ ವಿ.ವಿ ಪ್ಯಾಟ್ ಬದಲಾವಣೆ; ಕೆಲವೆಡೆ ಮತದಾನಕ್ಕೆ ಹುರುಪು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 3:56 IST
Last Updated 19 ಏಪ್ರಿಲ್ 2019, 3:56 IST
ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿಯ 95 ವರ್ಷದ ಮಾಲಮ್ಮ ತಮ್ಮ ಮೊಮ್ಮಗ ನಂಜಯ್ಯ ಅವರೊಂದಿಗೆ ಬಂದು ಮತದಾನ ಮಾಡಿದರು (ಎಡಚಿತ್ರ). ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಮತ ಚಲಾಯಿಸಿದರು
ನಂಜನಗೂಡು ತಾಲ್ಲೂಕಿನ ಕೆಂಪಿಸಿದ್ದನಹುಂಡಿಯ 95 ವರ್ಷದ ಮಾಲಮ್ಮ ತಮ್ಮ ಮೊಮ್ಮಗ ನಂಜಯ್ಯ ಅವರೊಂದಿಗೆ ಬಂದು ಮತದಾನ ಮಾಡಿದರು (ಎಡಚಿತ್ರ). ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಮತ ಚಲಾಯಿಸಿದರು   

ನಂಜನಗೂಡು: ತಾಲ್ಲೂಕಿನಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ 76.46ರಷ್ಟು ಮತದಾನವಾಗಿದೆ.

ಕ್ಷೇತ್ರದಲ್ಲಿ ಒಟ್ಟು 2,11,457 ಮತದಾರರಿದ್ದು, 1,61,969 ಮಂದಿ ಮತ ಚಲಾಯಿಸಿದ್ದಾರೆ. 83,187 ಪುರುಷರು, 78,781 ಮಹಿಳಾ ಮತದಾರರು ಹಾಗೂ ಇತರೆ ಒಬ್ಬ ಮತದಾರ ಮತ ಹಾಕಿದ್ದಾರೆ.

ನಗರದ ಜೂನಿಯರ್ ಕಾಲೇಜು, ಚಾಮಲಾಪುರದ ಹುಂಡಿಯ ಸಖಿ ಜನಸ್ನೇಹಿ ಮತದಾನ ಕೇಂದ್ರದಲ್ಲಿ ಸರದಿ ಸಾಲು ಕಂಡುಬಂತು. ಶ್ರೀರಾಂಪುರ, ಶಂಕರಪುರ, ಹಳ್ಳದಕೇರಿ, ಚಾಮಲಾ ಪುರ ಮೊಹಲ್ಲಾಗಳಲ್ಲಿ ಹೆಚ್ಚಿನ ಹುರುಪು ಕಂಡುಬಂತು.

ADVERTISEMENT

ತಾಲ್ಲೂಕಿನ ಸಿಂಗಾರಿಪುರ, ಹೊಸಹಳ್ಳಿ, ಹುಣಸನಾಳು, ಹುರ, ಕಳಲೆ ಹಾಗೂ ನಗರದ ಚಾಮಲಾಪುರ, ಹಳ್ಳದ ಕೇರಿ ಬಡಾವಣೆಗಳ ಮತಗಟ್ಟೆ ಗಳಲ್ಲಿ ವಿ.ವಿ ಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂತು. ಇದರಿಂದ 1 ಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭಿಸಲಾಯಿತು. 11 ಕಡೆಗಳಲ್ಲಿ ವಿ.ವಿ ಪ್ಯಾಟ್‌ಗಳನ್ನು ಬದಲಾಯಿಸಿ ಮತದಾನಕ್ಕೆ ಅನುವು ಮಾಡಿಕೊಡ ಲಾಯಿತು.

ತಾಲ್ಲೂಕಿನ ಕೆಂಪಿಸಿದ್ದನಹುಂಡಿಯ 95 ವರ್ಷದ ಮಾಲಮ್ಮ ಸಿದ್ದೇಗೌಡ ತಮ್ಮ ಮೊಮ್ಮಗ ನಂಜಯ್ಯ ಅವರೊಂದಿಗೆ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ಹದಿನಾರು ಗ್ರಾಮದ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಕುಟುಂಬ ಸದಸ್ಯರೊಟ್ಟಿಗೆ ಬಂದು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.