ADVERTISEMENT

ನಂಜನಗೂಡು: ತಂತ್ರಾಂಶ ಬಳಸಿದ ಮೊದಲ ನಗರಸಭೆ

ಜನರ ಸಮಸ್ಯೆ ಆಲಿಸಲು ಪೋರ್ಟಲ್ ಸೇವೆಗೆ ಶಾಸಕ ದರ್ಶನ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 5:10 IST
Last Updated 25 ಅಕ್ಟೋಬರ್ 2025, 5:10 IST
ನಂಜನಗೂಡಿನ ನಗರಸಭೆ ಆವರಣದಲ್ಲಿ ಶುಕ್ರವಾರ  ಶಾಸಕ ದರ್ಶನ್ ಧ್ರುವನಾರಾಯಣ  ಡಿಜಿಟಲ್ ಸೇವೆಗೆ ಚಾಲನೆ ನೀಡಿದರು.
ನಂಜನಗೂಡಿನ ನಗರಸಭೆ ಆವರಣದಲ್ಲಿ ಶುಕ್ರವಾರ  ಶಾಸಕ ದರ್ಶನ್ ಧ್ರುವನಾರಾಯಣ  ಡಿಜಿಟಲ್ ಸೇವೆಗೆ ಚಾಲನೆ ನೀಡಿದರು.   

ನಂಜನಗೂಡು: ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೂಲ ಸೌಕರ್ಯ ಸೇವೆಗಳಿಗೆ ಸಂಬಂಧಪಟ್ಟ ಸಮಸ್ಯೆ, ದೂರುಗಳ ನಿರ್ವಹಣೆಗೆ ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಲು ಅನೂಕೂಲವಾಗುವಂತೆ ಅಶೋಕ ವಿಶ್ವವಿದ್ಯಾಲಯ ಮತ್ತು ಐಸಾಕ್ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ಸಹಯೋಗದೊಂದಿಗೆ ಸಿವಿಂಕ್ ಪೋರ್ಟಲ್ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.

ನಗರಸಭೆ ಆವರಣದಲ್ಲಿ ಶುಕ್ರವಾರ ಡಿಜಿಟಲ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಈ ಸೇವೆ ಚಾಲ್ತಿಯಲ್ಲಿದೆ. ಆದರೆ, ನಂಜನಗೂಡು ನಗರಸಭೆ ಈ ತಂತ್ರಾಂಶ ಜನರ ಸೇವೆಗೆ ಅಳವಡಿಸಿಕೊಂಡ ದೇಶದಲ್ಲೇ ಮೊದಲ ನಗರಸಭೆಯಾಗಿದೆ. ಅಶೋಕ ವಿಶ್ವವಿದ್ಯಾಲಯ ಮತ್ತು ಐಸಾಕ್ ಸೆಂಟರ್‌ನ ಐಶ್ವರ್ಯ ಸುನಾದ್ ತಂಡ ಉಚಿತವಾಗಿ ನಗರಸಭೆಗೆ ತಂತ್ರಜ್ಞಾನವನ್ನು ಅಳವಡಿಸಿದ್ದಾರೆ. ನಗರದ 31 ವಾರ್ಡ್‌ಗಳಲ್ಲಿ ಪ್ರತಿ ವಾರ್ಡಿನ 3 ಕಡೆ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಜನರು ವಾರ್ಡ್‌ ಹಾಗೂ ನಗರಸಭೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಿ ನೇರವಾಗಿ ದಾಖಲಿಸಬಹುದು. ಅಧಿಕಾರಿಗಳು ಸ್ಪಂದಿಸದಿದ್ದರೆ, ದೂರು ದಾಖಲಿಸಬಹುದು ಎಂದು ತಿಳಿಸಿದರು.

ADVERTISEMENT

 ಮಾಜಿ ಶಾಸಕ ಕಳಲೆ ಕೇಶವಮೂರ್ತಿ , ನಗರಸಭಾ ಅಧ್ಯಕ್ಷಶ್ರೀಕಂಠ ಸ್ವಾಮಿ , ಉಪಾಧ್ಯಕ್ಷೆ ರಿಯಾನಾ ಬಾನು ರ, ನಗರಸಭಾ ಆಯುಕ್ತ ವಿಜಯ್ , ಸದಸ್ಯರಾದ ಮಹೇಶ್ , ಗಂಗಾಧರ್ , ಸ್ವೇತಾ ಲಕ್ಷ್ಮೀ , ಗಾಯತ್ರಿ ಮೋಹನ್ , ಪ್ರದೀಪ್ , ಯೋಗೀಶ್ , ರಮೇಶ್ , ಬಸವರಾಜ್ , ಯೋಗೇಶ್ , ರೆಹನಾ ಬಾನು , ಮಹದೇವಸ್ವಾಮಿ , ಮಹದೇವ ಪ್ರಸಾದ್ , ಸೌಭಾಗ್ಯ , ರಮೇಶ್ ,ಪರಿಸರ ಇಂನಿಯರ್ ಮೈತ್ರಾದೇವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.