ನಂಜನಗೂಡು: ತಾಲ್ಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಶುಕ್ರವಾರ ಕೋಡಿ ಮಾದೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ದೇವಾಲಯದಲ್ಲಿ ಬೆಳಿಗ್ಗೆ ಮಹದೇಶ್ವರ ಸ್ವಾಮಿ ಮೂರ್ತಿಗೆ ಪೂಣ್ಯಾಹ, ಹೋಮ ನಡೆಸಲಾಯಿತು. ನದಿಯಲ್ಲಿ ಗಂಗೆ ಪೂಜೆ ನಡೆಸಿ ದೇವರ ಮೂರ್ತಿಯನ್ನು, ವೀರಗಾಸೆ ಕುಣಿತ. ಛತ್ರಿ, ಚಾಮರ, ತಮಟೆ, ನಗಾರಿ ಹಾಗೂ ಮಂಗಳವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಜಾತ್ರೆಗೆ ಆಗಮಿಸಿದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕಂತೆ ಮಹದೇಶ್ವರ ಬೆಟ್ಟದ ಮಠ ಅಧ್ಯಕ್ಷ ಮಹಾಂತ ದೇಶ ಕೇಂದ್ರ ಸ್ವಾಮೀಜಿ, ಕಾರ್ಯ ಸ್ವಾಮಿ ಮಠದ ಮಹೇಶ್ವರ ಸ್ವಾಮೀಜಿ, ಕಪ್ಪಸೋಗೆ ಗ್ರಾಮದ ಜಡೆ ಶಂಕರ ಸ್ವಾಮೀಜಿ, ವೀರಭದ್ರಸ್ವಾಮೀಜಿ, ಶ್ರೀಕಂಠ ಸ್ವಾಮೀಜಿ, ಬಸಪ್ಪ ದೇವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.