ನಂಜನಗೂಡು (ಮೈಸೂರು): ತಾಲ್ಲೂಕಿನ ಕೊತ್ತನಹಳ್ಳಿ ಗ್ರಾಮದಲ್ಲಿ ಸೋಮವಾರ ಜಯರಾಮ ಎಂಬವರ ಪತ್ನಿ ಮಹದೇವಮ್ಮ (45), ಮಗಳು ಪ್ರಿಯಾ (20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.
ದ್ವಿತೀಯ ಪಿಯುಸಿ ಉತ್ತೀರ್ಣಳಾಗಿದ್ದ ಪ್ರಿಯಾ ಸಿಇಟಿ, ಎನ್ಇಇಟಿ ಪರೀಕ್ಷೆ ಬರೆದಿದ್ದು, ಕಡಿಮೆ ಅಂಕ ಬಂದಿದೆ ಎಂದು ಮನನೊಂದಿದ್ದಳು. ಇದರಿಂದಾಗಿ ತಾಯಿ ಕೂಡ ಖಿನ್ನತೆಗೆ ಒಳಗಾಗಿದ್ದರು. ಸೋಮವಾರ ಬೆಳಿಗ್ಗೆ ಮನೆಯ ಕೊಟ್ಟಿಗೆಯಲ್ಲಿ ತಾಯಿ ಮಹದೇವಮ್ಮ ಮತ್ತು ಮಗಳು ಪ್ರಿಯಾ ಇಬ್ಬರು ಅಕ್ಕ-ಪಕ್ಕದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿದ್ದಾರೆ.
ಆರೋಪ: ‘ಮೃತ ಮಹದೇವಮ್ಮಳ ಪತಿ ಜಯರಾಮ ಮಹದೇವಮ್ಮಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ, ಈ ಸಂಬಂಧ ದಿನನಿತ್ಯ ಖ್ಯಾತೆ ತೆಗೆದು ಜಗಳ ಮಾಡುತ್ತಿದ್ ದಎಂದು ಪೊಲೀಸರಿಗೆ ದೂರನ್ನೂ ನೀಡಿದ್ದರು. ಪೋಲೀಸರು ಕ್ರಮ ಕೈಗೊಂಡಿರಲಿಲ್ಲ. ಜಯರಾಮನ ವರ್ತನೆ ಮಿತಿ ಮೀರಿದ್ದರಿಂದ ಬೇಸತ್ತು ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮಹದೇವಮ್ಮ ಅವರ ತವರಿನ ಸಂಬಂಧಿಕರು ಆರೋಪಿಸಿದ್ದಾರೆ.
ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಮಹಜರು ನಡೆಸಿದರು. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.