ADVERTISEMENT

ಆನ್‌ಲೈನ್ ಬೆಟ್ಟಿಂಗ್‌: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 13:54 IST
Last Updated 22 ಏಪ್ರಿಲ್ 2025, 13:54 IST
ಐಪಿಎಲ್‌ ಬೆಟ್ಟಿಂಗ್‌ (ಸಾಂದರ್ಭಿಕ ಚಿತ್ರ)
ಐಪಿಎಲ್‌ ಬೆಟ್ಟಿಂಗ್‌ (ಸಾಂದರ್ಭಿಕ ಚಿತ್ರ)   

ಮೈಸೂರು: ‘ಜನಸಾಮಾನ್ಯರು, ಯುವಜನರು ಆನ್‌ಲೈನ್ ಗೇಮಿಂಗ್ ಹಾಗೂ ಬೆಟ್ಟಿಂಗ್‌ ಚಟಕ್ಕೆ ಒಳಗಾಗಿದ್ದು, ಅಪಾರ ಪ್ರಮಾಣದಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಲವರು ಆತ್ಮಹತ್ಯೆಯೂ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್‌ಬಿಎಂ ಮಂಜು ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಜನರು ಹೆಚ್ಚು ಹಣ ಕಳೆದುಕೊಳ್ಳುತ್ತಿದ್ದಾರೆ. ಖ್ಯಾತ ನಟ, ನಟಿಯರು ಇದಕ್ಕೆ ಪ್ರಚಾರ ನೀಡುತ್ತಿರುವುದು ಪ್ರಮುಖ ಕಾರಣ. ಆಟವಾಡಲು ಪ್ರಚೋದನೆ ನೀಡುವವರಿಗೆ ಕೆಲ ಆ್ಯಪ್‌ಗಳು ಶೇ 30ರಷ್ಟು ಕಮಿಷನ್ ಆಮಿಷವೊಡ್ಡುತ್ತಿವೆ. ಗೇಮಿಂಗ್‌ ಆ್ಯಪ್‌ಗಳು ಮಕ್ಕಳಿಂದಲೂ ಹಣ ವಸೂಲಿ ಮಾಡುತ್ತಿವೆ. ಕೂಡಲೇ ಆ್ಯಪ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಬೇಕು. ಬೆಟ್ಟಿಂಗ್ ದಂಧೆಗೆ ಪ್ರಚೋದನೆ ನೀಡುವವರಿಗೂ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

‘ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಜನಪ್ರತಿನಿಧಿಗಳಿಲ್ಲದೆ ನಗರ ಹಾಗೂ ಜನರ ಅಭಿವೃದ್ಧಿ ಕುಂಠಿತವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಕಾಶ್ ಎಸ್.ಪ್ರಿಯದರ್ಶನ್, ದಿನೇಶ್‌ಗೌಡ, ನರಸಿಂಹೇಗೌಡ, ರಾಮಕೃಷ್ಣೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.