ಸುನಿಲ್ ಕುಮಾರ್
ಬೆಟ್ಟದಪುರ: ‘ಪ್ರಧಾನಮಂತ್ರಿ ಮೋದಿಯವರ ಅಚಲ ನಿರ್ಧಾರದೊಂದಿಗೆ ಪಹಲ್ಗಾಮ್ ದಾಳಿಗೆ ಪ್ರತಿರೋಧವಾಗಿ ಬುಧವಾರ ‘ಆಪರೇಷನ್ ಸಿಂಧೂರ’ ನೆಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಿದೆ’ ಎಂದು ಬಿಜೆಪಿ ಮುಖಂಡ ಸುನಿಲ್ ಕುಮಾರ್ ತಿಳಿಸಿದ್ದಾರೆ.
‘ಕಾಶ್ಮೀರದ ಪ್ರಮುಖ ಪ್ರವಾಸಿ ತಾಣವಾದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಚೋದಿತ ಉಗ್ರಗಾಮಿಗಳು 26 ಅಮಾಯಕ ಪ್ರವಾಸಿಗರ ಮೇಲೆ ಧರ್ಮದ ಆಧಾರದಿಂದ ಆಕ್ರಮಣ ಮಾಡಲಾಗಿತ್ತು. ಇದಕ್ಕೆ ಪ್ರತಿಕಾರವಾಗಿ ವಾಯುಸೇನೆ, ಭೂ ಸೇನೆ ಹಾಗೂ ನೌಕಾ ಸೇನೆಯ ಸರ್ವ ಸನ್ನದ್ಧ ನಿರ್ಧಾರದೊಂದಿಗೆ ‘ಆಪರೇಷನ್ ಸಿಂಧೂರ’ ನೆಡೆಸಲಾಗಿದೆ’ ಎಂದಿದ್ದಾರೆ.
‘ಭಾರತ ಯಾವುದೇ ಧರ್ಮದ ವಿರುದ್ಧ ಹೋರಾಡದೆ, ಉಗ್ರರ ವಿರುದ್ಧ ಹೋರಾಟ ನೆಡೆಸಿದೆ. ಪ್ರಧಾನ ಮಂತ್ರಿ ಹೇಳಿದ ಹಾಗೆ ಉಗ್ರಗಾಮಿಗಳನ್ನು ಹೊಡೆದು ಹಾಕಲಾಗಿದೆ. ಪಾಕಿಸ್ತಾನ ಇನ್ನಾದರೂ ಬುದ್ಧಿ ಕಲಿತು ಉಗ್ರಗಾಮಿಗಳನ್ನು ಪೋಷಿಸಲು ಕೈಬಿಡಬೇಕು. ಹೆಚ್ಚು ಉಗ್ರಗಾಮಿ ಸಂಘಟನೆಗಳು ಪಿಒಕೆ ಬಳಿ ನೆಲೆ ಕಂಡುಕೊಂಡಿರುವುದರಿಂದ ಆದಷ್ಟು ಬೇಗ ಪಿಒಕೆಯನ್ನು ಭಾರತ ವಶಪಡಿಸಿಕೊಳ್ಳಬೇಕು. ಭಾರತೀಯ ಸೇನೆಯ ಚಾಕಚಕ್ಯತೆ ಹಾಗೂ ಮೋದಿಯವರ ಬಾಂಧವ್ಯದೊಂದಿಗೆ ವಿಶ್ವದ 16 ದೇಶಗಳು ಭಾರತೀಯರ ಬೆಂಬಲಕ್ಕೆ ನಿಂತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.