ADVERTISEMENT

ಚಿಪ್ಪುಹಂದಿಯ ಚಿಪ್ಪು ಮಾರಾಟ ಯತ್ನ: ಬಂಧನ

2.5 ಕೆ.ಜಿಯಷ್ಟು ಚಿಪ್ಪು ವಶ

​ಪ್ರಜಾವಾಣಿ ವಾರ್ತೆ
Published 9 ಮೇ 2019, 9:12 IST
Last Updated 9 ಮೇ 2019, 9:12 IST

ಮೈಸೂರು: ಚಿಪ್ಪುಹಂದಿಗಳನ್ನು ಬೇಟೆಯಾಡಿ, ಅವುಗಳ ಚಿಪ್ಪುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಹಾಸನದ ಅಣ್ಣಪ್ಪ ಎಂಬಾತನನ್ನು ಬುಧವಾರ ಬಂಧಿಸಲಾಗಿದೆ.

ಕೆ.ಆರ್.ನಗರ ತಾಲ್ಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಿದ ಅರಣ್ಯ ಸಂಚಾರ ದಳದ ಪೊಲೀಸರು, 2.5 ಕೆ.ಜಿಯಷ್ಟು ತೂಕದ ಚಿಪ್ಪುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.

ಚಿಪ್ಪುಗಳನ್ನು ಕಾಳಸಂತೆಯ ಏಜೆಂಟರಿಗೆ ಮಾರಾಟ ಮಾಡಲಿರುವ ಮಾಹಿತಿ ತಿಳಿದ ಸಬ್‌ಇನ್‌ಸ್ಪೆಕ್ಟರ್ ಎಂ.ಬಿ.ರಮೇಶ್ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದರು.

ADVERTISEMENT

ಚಿಪ್ಪುಹಂದಿ ಚಿಪ್ಪುಗಳಿಗೆ ವಿದೇಶದಲ್ಲಿ ಅತೀವ ಬೇಡಿಕೆ ಇದೆ. ಕಾಳಸಂತೆಯಲ್ಲಿ ಅಂದಾಜು ₹ 50 ಸಾವಿರದಿಂದ ₹ 1 ಲಕ್ಷದವರೆಗೆ ಒಂದೊಂದು ಚಿಪ್ಪು ಮಾರಾಟವಾಗುತ್ತದೆ. ಅದಕ್ಕಾಗಿ ಚಿಪ್ಪುಹಂದಿಯನ್ನು ಬೇಟೆಯಾಡುವ ದೊಡ್ಡ ಮಾಫಿಯಾ ಮೈಸೂರು ಜಿಲ್ಲೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.