ಮೈಸೂರು: ಕೆ.ಆರ್.ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಪ್ಲಾಸ್ಮಾ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಶುಕ್ರವಾರ ಉದ್ಘಾಟಿಸಿದರು.
‘ಪ್ಲಾಸ್ಮಾ ಚಿಕಿತ್ಸೆ ಈಗ ಅನಿವಾರ್ಯ ವಾಗಿದೆ. ಪ್ಲಾಸ್ಮಾ ದಾನಿಗಳನ್ನು ಹುಡು ಕುವ ಪ್ರಯತ್ನ ಮಾಡಿದೆವು. ಆದರೆ, ಇಲ್ಲಿ ಪ್ಲಾಸ್ಮಾ ತೆಗೆಯುವ ಉಪಕರಣ ಇರಲಿಲ್ಲ. ಮಂಡ್ಯಕ್ಕೆ ಹೋಗಿ ಈ ಕಾರ್ಯ ನಡೆಸುತ್ತಿದ್ದೆವು. ಹೀಗಾಗಿ, ಇಲ್ಲಿ ಪ್ಲಾಸ್ಮಾ ಕೇಂದ್ರ ಆರಂಭಿಸಿದ್ದೇವೆ. ಡಾ.ಶಾಲಿನಿ, ನಂದಕುಮಾರ್ ಎಂಬುವವರು ಉಪ ಕರಣ ಕೊಡುಗೆಯಾಗಿ ನೀಡಿದ್ದಾರೆ’ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.