ADVERTISEMENT

ಮುಸ್ಲಿಮರದು ಶೌರ್ಯ ಅಲ್ಲ, ಬರೀ ಕ್ರೌರ್ಯ: ಪ್ರತಾಪ ಸಿಂಹ ಆರೋಪ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 12:36 IST
Last Updated 19 ಫೆಬ್ರುವರಿ 2025, 12:36 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಮುಸ್ಲಿಮರದು ಶೌರ್ಯ ಅಲ್ಲ; ಬರೀ ಕ್ರೌರ್ಯ. ಶೌರ್ಯ ಎಂಬುದು ಅವರಿಗೆ ಗೊತ್ತೇ ಇಲ್ಲ’ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹಿಂದೂ ಮಹಾರಾಜರ ಬಳಿ ಶೌರ್ಯವಿತ್ತು’ ಎಂದರು.

‘ಉದಯಗಿರಿ ಪ್ರಕರಣದಲ್ಲಿ ಆರೋಪಿಗಳ ಬಂಧನದ ವಿಷಯದಲ್ಲಿ ವಿಳಂಬ ಮಾಡಲಾಗುತ್ತಿದೆ. ಪುಂಡ ಮುಸ್ಲಿಮರನ್ನು ಬಂಧಿಸದಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮೈಸೂರಿಗೆ ಬಂದಾಗ ಪೊಲೀಸರಿಗೆ ಹೇಳಿ ಹೋಗಿದ್ದಾರೆ. ಪುಂಡರನ್ನು ಬಂಧಿಸದಂತೆ ನಿರ್ದೇಶನ ನೀಡಲೆಂದೇ ಅವರು ಬಂದಿದ್ದರು. ಅವರು ಗೃಹ ಸಚಿವರ ಸ್ಥಾನದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಮುಖ್ಯಮಂತ್ರಿ ಯಾರನ್ನೂ ಬಂಧನ ಮಾಡಿಸುತ್ತಿಲ್ಲ. 16 ಮಂದಿ ಆರೋಪಿಗಳ ನಂತರ ಬೇರಾರನ್ನೂ ಬಂಧಿಸಿಲ್ಲ. ಮುಸ್ಲಿಮರ ಓಲೈಕೆಯೇ ಈ ಸರ್ಕಾರದ ಒಂದುಸಾಲಿನ ಕಾರ್ಯಸೂಚಿ’ ಎಂದು ದೂರಿದರು.

ADVERTISEMENT

‘ಉದಯಗಿರಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಮೌಲ್ವಿಯನ್ನು ಬಂಧಿಸಲು ನಡುಕ ಇದೆಯಾ? ಬಾಂಬ್ ಹಾಕುವಾಗ ಭಯೋತ್ಪಾದಕರು ಅಲ್ಲಾನ ಹೆಸರು ಹೇಳುತ್ತಾರೆ. ಆಗ ಆ ಧರ್ಮಕ್ಕೆ ಅವಮಾನ ಆಗಲ್ವಾ? ಪೋಸ್ಟರ್ ಹಾಕಿದಾಗ ಮಾತ್ರ ಅವಮಾನ ಆಗುತ್ತದೆಯಾ? ಆ ಅನಕ್ಷರಸ್ಥ ಮೌಲ್ವಿಯನ್ನು ತಕ್ಷಣ ಬಂಧಿಸಬೇಕು. ಅವನಿಗೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ? ಉದಯಗಿರಿಗೇ ಬೇರೆ ಸಂವಿಧಾನ ಇದೆಯಾ?’ ಎಂದು ಕೇಳಿದರು.

‘ಮುಸ್ಲಿಂ ಪುಂಡರ ಪರವಾಗಿರುವ ವ್ಯಕ್ತಿ ಈ ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿಯನ್ನು ಓಲೈಸಲು ನಿಂತ ಗೃಹ ಸಚಿವ. ಇಂಥವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ? ಸಿದ್ದರಾಮಯ್ಯಗೆ ಮುಸ್ಲಿಮರ ಮತ ಬೇಕಷ್ಟೆ. ಈ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು ಬೇಕಾಗಿಲ್ಲ. ಉಡಾಫೆ ಭಾಷಣ ಮಾಡಿ ಕೊಂಡು ಮುಸ್ಲಿಮರ ಓಲೈಕೆಯಷ್ಟೇ ಅವರ ಕೆಲಸವಾಗಿದೆ’ ಎಂದು ಟೀಕಿಸಿದರು.

‘ದೇಶ ಇಬ್ಭಾಗವಾದಾಗಲೇ ಮುಸ್ಲಿಮರು ಈ ದೇಶ ಬಿಟ್ಟು ತೊಲಗಿಬಿಡಬೇಕಿತ್ತು. ಇಲ್ಲಿ ಉಳಿದಕೊಂಡವರು ಮಕ್ಕಳನ್ನು ಹುಟ್ಟಿಸುವುದು ಬಿಟ್ಟು ಬೇರೇನು ಮಾಡುತ್ತಿದ್ದಾರೆ ಹೇಳಿ?’ ಎಂದು ಕೇಳಿದರು.

‘ಉತ್ತರಪ್ರದೇಶದಂತೆ ರಾಜ್ಯದಲ್ಲಿ ಬುಲ್ಡೋಜರ್ ಕಾನೂನು ತರಲು ಇಲ್ಲಿ ಯಾರಿಗೆ ಧಮ್‌ ಇದೆ? ಯೋಗಿ ಆದಿತ್ಯನಾಥ್ ಅವರಂಥಾಗಲು ಧಮ್‌ ಬೇಕು. ಇಲ್ಲಿನ ಮುಖ್ಯಮಂತ್ರಿಗೆ ಧಮ್‌ ಇಲ್ಲ. ಪರಮೇಶ್ವರ್ ಅವರಿಂದ ಇದನ್ನೆಲ್ಲಾ ನಿರೀಕ್ಷಿಸಲು ಸಾಧ್ಯನಾ’ ಎಂದು ಪ್ರಶ್ನಿಸಿದರು.

‘ಹಿಂದೂಗಳ ಮೇಲೆ ಕಲ್ಲು ಹೊಡೆಯಲು ಕಾಂಗ್ರೆಸ್ ಸರ್ಕಾರವು ಪುಂಡ ಮುಸ್ಲಿಮರಿಗೆ ಉಚಿತ ಪರವಾನಗಿ ಕೊಟ್ಟಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.