ADVERTISEMENT

ಮೈಸೂರು | ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 14:39 IST
Last Updated 27 ಜೂನ್ 2025, 14:39 IST

ಮೈಸೂರು: ಗಾಣಿಗ ಮಹಾಸಭಾದದಿಂದ ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 90ರಷ್ಟು ಅಂಕ ಪಡೆದು ಉತ್ತೀರ್ಣರಾದ ಗಾಣಿಗ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಾಸಭಾ ಅಧ್ಯಕ್ಷ ಡಾ.ಕೆ.ವಿಜಯಕುಮಾರ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಜುಲೈ 31 ಕಡೆಯ ದಿನ. ಆಸಕ್ತ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಭಾವಚಿತ್ರವನ್ನು ನಗರದ ತಿಲಕ್ ನಗರ ಬಡಾವಣೆಯ 17ನೇ ಕ್ರಾಸ್ 1ನೇ ಮೇನ್‌ನಲ್ಲಿರುವ ಗಾಣಿಗ ಮಹಾಸಭಾ ಕಚೇರಿಗೆ ತಲುಪಿಸಬೇಕು. ಮಾಹಿತಿಗೆ ಮೊ.9900818151, 9611074086 ಸಂಪರ್ಕಿಸಬಹುದು’ ಎಂದು ಮಾಹಿತಿ ನೀಡಿದರು.

ಮುಂಬರುವ ದಿನದಲ್ಲಿ ಸಮಾರಂಭ ಏರ್ಪಡಿಸಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು.

ADVERTISEMENT

ಗಾಣಿಗ ಮಹಾಸಭಾದ ಖಜಾಂಚಿ ಕಮಲಾಕ್ಷಿ, ಕಾರ್ಯದರ್ಶಿ ಮಹದೇವ ಗಾಣಿಗ, ಮುಖಂಡರಾದ ವೆಂಕಟಲಕ್ಷ್ಮಯ್ಯ ಶೆಟ್ಟಿ, ಗಜೇಂದ್ರ, ನಾರಾಯಣ, ನಾಗರಾಜು, ಚಲನಚಿತ್ರ ನಿರ್ದೇಶಕ ಎ.ಸಿ.ಪೂರ್ಣಚಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.