ADVERTISEMENT

ಮೈಸೂರಿನಲ್ಲಿ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 5:03 IST
Last Updated 3 ಮೇ 2019, 5:03 IST
ಅವಳಿ ಕೋಲ್ಮಿಂಚು...ಮೈಸೂರಿನಲ್ಲಿ ಮಂಗಳವಾರ ರಾತ್ರಿ ಗಗನದಲ್ಲಿ ಮೂಡಿದ ಅವಳಿ ಕೋಲ್ಮಿಂಚಿಗೆ ಒಂದರೆಕ್ಷಣ ಕಣ್ಣು ಕೋರೈಸುವ ಬೆಳಕು ಮೂಡಿ, ಚಿತ್ರಪಟದಂತೆ ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು. ತೆಂಗಿನಮರಕ್ಕೆ ಸಿಡಿಲು ಹೊಡೆಯುತ್ತಿದ್ದೆಯೋ ಏನೋ ಭ್ರಮೆ ಮೂಡಿಸಿತು.

ಮೈಸೂರು: ಜಿಲ್ಲೆಯ ತಿ.ನರಸೀಪುರ, ನಂಜನಗೂಡು ಹಾಗೂ ಮೈಸೂರು ತಾಲ್ಲೂಕುಗಳಲ್ಲಿ ಮಂಗಳವಾರ ರಾತ್ರಿ ಸಾಧಾರಣ ಮಳೆ ಸುರಿದಿದೆ. ಮಳೆಯು ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.

ತಿ.ನರಸೀಪುರ ತಾಲ್ಲೂಕಿನ ಬನ್ನೂರಿನಲ್ಲಿ 43 ಮಿ.ಮೀ, ಹತ್ತಹಳ್ಳಿಯಲ್ಲಿ 36, ತಲಕಾಡಿನಲ್ಲಿ 29, ನಂಜನಗೂಡು ತಾಲ್ಲೂಕಿನ ತಾಯೂರಿನಲ್ಲಿ 16.5, ಬಿಳಿಕೆರೆಯಲ್ಲಿ 14.5, ಮೈಸೂರು ತಾಲ್ಲೂಕಿನ ಕಡಕೊಳದಲ್ಲಿ 9, ಆಲನಹಳ್ಳಿಯಲ್ಲಿ 4.5, ರಮ್ಮನಹಳ್ಳಿಯಲ್ಲಿ 5.5 ಮಿ.ಮೀ ಮಳೆಯಾಗಿದೆ.

ಹಲವೆಡೆ ಗುಡುಗು ಮತ್ತು ಮಿಂಚಿನ ಆರ್ಭಟಗಳು ಇದ್ದವು. ಕೆಲವೆಡೆ ಗಾಳಿ ಬಿರುಸಾಗಿ ಬೀಸಿತು. ಇದರಿಂದ ನಗರದ ನ್ಯೂಕಾಂತರಾಜ್ ಅರಸ್ ರಸ್ತೆಯಲ್ಲಿ ತೆಂಗಿನಮರವೊಂದು ಉರುಳಿ ಬಿದ್ದಿದೆ. ಜಯಪುರದ ಬಸ್‌ನಿಲ್ದಾಣದ ಸಮೀಪ ಭಾರಿ ಗಾತ್ರದ ಮರವೊಂದು ಧರೆಗುರುಳಿ ಶೌಚಾಲಯದ ಕಾಂಪೌಂಡ್‌ಗೆ ಹಾನಿಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.