ಅರ್ಜಿ ಆಹ್ವಾನ
ಮೈಸೂರು: ನಗರದ ರಂಗಾಯಣದಿಂದ 1 ವರ್ಷದ ರಂಗಶಿಕ್ಷಣ ತರಬೇತಿಗೆ (ಡಿಪ್ಲೊಮಾ) ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ 18ರಿಂದ 28ರೊಳಗಿನ ವಯೋಮಾನದವರು ಅರ್ಜಿ ಸಲ್ಲಿಸಬಹುದು. ತರಬೇತಿ ಅವಧಿಯಲ್ಲಿ ಊಟ, ವಸತಿ ಹಾಗೂ ಪಠ್ಯ ಸಾಮಗ್ರಿಗಳ ವೆಚ್ಚವನ್ನು ನಿಯಮಾನುಸಾರ ವಿದ್ಯಾರ್ಥಿವೇತನದಲ್ಲಿ ಭರಿಸಲಾಗುವುದು.
ಅರ್ಜಿಯನ್ನು ವೆಬ್‌ಸೈಟ್ http://rangayanamysore.karnataka.gov.in ನಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಜೂನ್ 30ರ ಒಳಗೆ ಕಚೇರಿಗೆ ಅಂಚೆ ಮೂಲಕ ತಲುಪಿಸಬೇಕು. ಸಂದರ್ಶನ ದಿನಾಂಕವನ್ನು ಪತ್ರದ ಮೂಲಕ ತಿಳಿಸಲಾಗುವುದು. ಮಾಹಿತಿಗೆ 0821–2512639, ಮೊ.ಸಂ. 94496 30465 ಸಂಪರ್ಕಿಸಬಹುದು ಎಂದು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.