ADVERTISEMENT

ಆದಿವಾಸಿ ಜನರ ಆರ್ಥಿಕತೆಗೆ ನರೇಗಾ ಪೂರಕ: ಪುಷ್ಪವತಿ

ಹೆಬ್ಬಳ್ಳ ಹಾಡಿಯಲ್ಲಿ ರೋಜ್‌ಗಾರ್ ದಿವಸ್ ಆಚರಣೆಯಲ್ಲಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:47 IST
Last Updated 14 ಜೂನ್ 2025, 14:47 IST
ಹುಣಸೂರು ತಾಲ್ಲೂಕಿನ ಕಡೇಮನುಗನಹಳ್ಳಿ ಪಂಚಾಯಿತಿಯ ಹೆಬ್ಬಳ್ಳ ಗಿರಿಜನರ ಹಾಡಿಯಲ್ಲಿ ಶುಕ್ರವಾರ ತಾ.ಪಂ. ಆಯೋಜಿಸಿದ್ದ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನ ಹಾಗೂ ರೋಜ್ಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಗಿರಿಜನರು ಭಾಗವಹಿಸಿದ್ದರು.
ಹುಣಸೂರು ತಾಲ್ಲೂಕಿನ ಕಡೇಮನುಗನಹಳ್ಳಿ ಪಂಚಾಯಿತಿಯ ಹೆಬ್ಬಳ್ಳ ಗಿರಿಜನರ ಹಾಡಿಯಲ್ಲಿ ಶುಕ್ರವಾರ ತಾ.ಪಂ. ಆಯೋಜಿಸಿದ್ದ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನ ಹಾಗೂ ರೋಜ್ಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಗಿರಿಜನರು ಭಾಗವಹಿಸಿದ್ದರು.   

ಹುಣಸೂರು: ಗಿರಿಜನರು  ವಲಸೆ ಹೋಗದಂತೆ ತಡೆಯಲು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಆರ್ಥಿಕ ಶಕ್ತಿ ಹೊಂದಿ ಬದುಕು ಕಟ್ಟಿಕೊಳ್ಳಲು ಮಹಾತ್ಮಗಾಂಧಿ ನರೇಗಾ ಯೋಜನೆ ಕಾಮಗಾರಿ ಸಹಕಾರಿ ಆಗಿದೆ ಎಂದು ತಾಲ್ಲೂಕು ಐ.ಇ.ಸಿ. ಸಂಯೋಜನಾಧಿಕಾರಿ ಪುಷ್ಪವತಿ ಹೇಳಿದರು.

 ಕಡೇಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಬ್ಬಳ್ಳ ಹಾಡಿಯಲ್ಲಿ ಆಯೋಜಿಸಿದ್ದ ದುಡಿಯೋಣ ಬಾ, ಸ್ತ್ರೀ ಚೇತನ ಅಭಿಯಾನ ಹಾಗೂ ರೋಜ್‌ಗಾರ್ ದಿವಸ್ ಆಚರಣೆಯಲ್ಲಿ ಹಾಡಿಯವರಿಗೆ ಸರ್ಕಾರಿ ಯೋಜನೆ ಕುರಿತು ಅವರು ಜಾಗೃತಿ ಮೂಡಿಸಿದರು. ಹಾಡಿಯಯವರು ಕೊಡಗಿನ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುವ ಬದಲಿಗೆ ನಿಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ   ಉದ್ಯೋಗ ಖಾತರಿ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಕೈ ಜೋಡಿಸಿದರೆ ನಿಮಗೆ ಆರ್ಥಿಕ ಶಕ್ತಿ ಸಿಗಲಿದೆ ಎಂದರು.

 ನರೇಗಾ ಯೋಜನೆಯಲ್ಲಿ ವೈಯಕ್ತಿಕ ಯೋಜನೆಗಳಿದ್ದು  ಹಾಡಿಯ ನಾಗರಿಕರು ಸಮರ್ಪಕವಾಗಿ ಬಳಸಿದರೆ ಸರ್ಕಾರ ನಿಮಗೆ ಹಣ ನೀಡಲಿದೆ ಎಂದರು.

ADVERTISEMENT

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಷಡಕ್ಷರಿ ಮಾತನಾಡಿ, ಹಾಡಿಯ 145 ಕುಟುಂಬಗಳಿಗೆ ಮನೆ ಮಂಜೂರಾಗಿದ್ದು,  ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿಕೊಳ್ಳುವ ಅವಕಾಶವಿದೆ. ಗಿರಿಜನರು ಈವರೆಗೂ ಮನೆ ನಿರ್ಮಿಸಿಲ್ಲ. ಈಗಲಾದರೂ ಮನೆ ನಿರ್ಮಿಸಿ ಎಂದು ಮನವಿ ಮಾಡಿದರು.

ಹೆಬ್ಬಳ್ಳ ಗ್ರಾಮ ಪಂಚಾಯಿತಿ ಸದಸ್ಯೆ ಗೌರಮ್ಮ ಟಿ, ರಾಧಾ. ಹಾಡಿ ಅಧ್ಯಕ್ಷ ಚಂದ್ರು, ಮುಖಂಡ ನಾಗೇಶ್, ಅಯ್ಯನಕೆರೆ ಹಾಡಿ ಶಿವಣ್ಣ, ಕಾಂತರಾಜು , ಹಾಡಿಯ ನಿವಾಸಿಗರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.