ADVERTISEMENT

ಚನ್ನಂಗೆರೆ ಗ್ರಾ.ಪಂ: ಸುನೀತಾ ದಿನೇಶ್ ಅಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 5 ಮೇ 2025, 14:34 IST
Last Updated 5 ಮೇ 2025, 14:34 IST
ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿ ಚನ್ನಂಗೆರೆ ಗ್ರಾ.ಪಂ ಅಧ್ಯಕ್ಷೆಯಾಗಿ ಸುನೀತಾ ದಿನೇಶ್ ಆಯ್ಕೆಯಾದರು
ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿ ಚನ್ನಂಗೆರೆ ಗ್ರಾ.ಪಂ ಅಧ್ಯಕ್ಷೆಯಾಗಿ ಸುನೀತಾ ದಿನೇಶ್ ಆಯ್ಕೆಯಾದರು   

ಸಾಲಿಗ್ರಾಮ: ತಾಲ್ಲೂಕಿನ ಚುಂಚನಕಟ್ಟೆ ಹೋಬಳಿ ಚನ್ನಂಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಸುನೀತಾ ದಿನೇಶ್ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಅನಿತಾ ಅವರು ರಾಜೀನಾಮೆ ನೀಡಿದ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸುನೀತಾ ದಿನೇಶ್ 12 ಮತ ಪಡೆದರೆ, ಪ್ರತಿಸ್ಪರ್ಧಿ ಮಣಿ ಅಂಬರೀಶ್ 5 ಮತ ಪಡೆದು ಪರಾಭವಗೊಂಡರು. 

ನೂತನ ಅಧ್ಯಕ್ಷೆ ಸುನೀತಾ ದಿನೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ಸ್ವಂತ ಕಟ್ಟಡದ ಅಗತ್ಯ ಇರುವ ಹಿನ್ನೆಲೆಯಲ್ಲಿ ಸರ್ವ ಸದಸ್ಯರ ಸಹಕಾರ ಪಡೆದು ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸುತ್ತೇನೆ ಎಂದರು.

ADVERTISEMENT

ಚುನಾವಣೆ ಪ್ರಕ್ರಿಯೆಯಲ್ಲಿ 17 ಮಂದಿ ಗ್ರಾ.ಪಂ ಸದಸ್ಯರು ಭಾಗವಹಿಸಿದ್ದರು.

ಮುಖಂಡರಾದ ಮಲ್ಲಿಕಾರ್ಜುನ್, ತಿಮ್ಮೇಗೌಡ, ನಟರಾಜ್, ಗಂಗಾಧರ್, ಬಾಬು, ಶಂಕರೇಗೌಡ, ಮಾಳಪ್ಪ, ಶಿವಮೂರ್ತಿ, ಶೇಷಾದ್ರಿ, ಸುಂದರೇಗೌಡ, ರಘುನಾಥ್, ಮಲ್ಲೇಶ್, ಸತೀಶ್, ರೇವಣ್ಣ, ಶಂಕರನಾಯಕ, ಪ್ರಕಾಶ್,ರಮೇಶ್, ನಿಂಗೇಗೌಡ, ನಟೇಶ, ರವಿ, ಮಂಜುನಾಥ್, ರಾಜು, ನಾಗೇಂದ್ರ, ಕುಮಾರ್, ಶಿವಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.