ಮೈಸೂರು: ಓಂ ಸಾಯಿಪ್ರಕಾಶ್ ನಿರ್ದೇಶನದ 105ನೇ ಚಲನಚಿತ್ರ ‘ಸೆಪ್ಟೆಂಬರ್ 10’ರ ಟೀಸರ್ ಅನ್ನು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗಣ್ಯರು ಸೋಮವಾರ ಬಿಡುಗಡೆಗೊಳಿಸಿದರು.
‘ಸೆ.10 ವಿಶ್ವ ಆತ್ಮಹತ್ಯೆ ತಡೆ ದಿನವಾಗಿದೆ. ಚಿತ್ರವು ದುರ್ಬಲ ಮನಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶವನ್ನು ಹೊಂದಿದ್ದು, ಈ ಶೀರ್ಷಿಕೆ ಇಡಲಾಗಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಗೊಳ್ಳಲಿದ್ದು, ದಿನಾಂಕವನ್ನು ಮುಂದೆ ಪ್ರಕಟಿಸಲಾಗುವುದು’ ಎಂದು ನಿರ್ದೇಶಕ ಓಂ ಸಾಯಿಪ್ರಕಾಶ್ ತಿಳಿಸಿದರು.
‘ಕೌಟುಂಬಿಕ ಕಥಾ ಹಂದರದ ಈ ಚಿತ್ರಕ್ಕೆ ವಿ. ನಾಗೇಂದ್ರಪ್ರಸಾದ್ ಸಂಗೀತ, ಜೆ.ಜಿ. ಕೃಷ್ಣ ಛಾಯಾಗ್ರಹಣ, ಬಿ.ಎ.ಮಧು ಸಂಭಾಷಣೆ ಇದೆ. ನಾಯಕ ನಟರಾಗಿ ಜಯಸಿಂಹ ಆರಾಧ್ಯ ಅಭಿನಯಿಸಿದ್ದು, ಶಶಿಕುಮಾರ್, ಶ್ರೀನಿವಾಸಮೂರ್ತಿ, ರವೀಂದ್ರನಾಥ್, ಶಿವಕುಮಾರ್, ಗಣೇಶ್‌ರಾವ್ ಕೇಸರ್‌ಕರ್, ಸಿಹಿಕಹಿ ಚಂದ್ರು, ಪದ್ಮಾವಾಸಂತಿ ಸೇರಿದಂತೆ ಹಲವು ಕಲಾವಿದರು ಪಾತ್ರ ಪೋಷಣೆ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಬಿಬಿಎಂಪಿ ಮಾಜಿ ಸದಸ್ಯ ಡಾ.ಎಸ್.ರಾಜು, ಲಯನ್ಸ್ ಕ್ಲಬ್ ಚೇರ್ಮನ್ ನಂದಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.