ADVERTISEMENT

ಮಧ್ಯಕಾಲೀನ ಪ್ರಪಂಚದ ಇತಿಹಾಸ ಕ್ರೂರವಾದುದು’

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 15:59 IST
Last Updated 21 ಸೆಪ್ಟೆಂಬರ್ 2022, 15:59 IST

ಮೈಸೂರು: ‘ಮಧ್ಯಕಾಲೀನ ಪ್ರಪಂಚದ ಇತಿಹಾಸ ಅತ್ಯಂತ ವಿಸ್ತಾರವಾದುದು ಹಾಗೂ ಕ್ರೂರವಾದುದು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಶೇಕ್ ಮಸ್ತಾನ್ ಅಭಿಪ್ರಾಯಪಟ್ಟರು.

ನಗರದ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಇತಿಹಾಸ ಸ್ನಾತಕೋತ್ತರ ವಿಭಾಗದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಧ್ಯಕಾಲೀನ ಪ್ರಪಂಚ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ಹೆಣ್ಣು ಮಕ್ಕಳು ಜನಿಸಿದರೆ ಅವರನ್ನು ಅತ್ಯಂತ ಕ್ರೂರವಾಗಿ ಸಾಯಿಸಲಾಗುತಿತ್ತು, ಯಾವ ಕುಟುಂಬಗಳು ಅತಿ ಹೆಚ್ಚಿನ ಹೆಣ್ಣುಮಕ್ಕಳನ್ನು ಕೊಲ್ಲುತ್ತವೆ ಅಂತ ಕುಟುಂಬಗಳನ್ನು ಉತ್ತಮ ಕುಟುಂಬಗಳೆಂದು ಭಾವಿಸಲಾಗುತ್ತಿತ್ತು–ಗೌರವಿಸಲಾಗುತ್ತಿತು ಹಾಗೂ ನಾಯಕರ ಸ್ಥಾನ ನೀಡಲಾಗುತ್ತಿತ್ತು’ ಎಂದರು.

ADVERTISEMENT

‘ಆ ಸಮಾಜದ ಬದಲಾವಣೆಗೆ ಕಾರಣರಾದವರು ಮಹಮದ್ ಪೈಗಂಬರ್’ ಎಂದು ತಿಳಿಸಿದರು.

ಇಸ್ಲಾಂ ಧರ್ಮದ ಬೆಳವಣಿಗೆ, ಕುರಾನ್ ಗ್ರಂಥ, ಹದೀಸ್, ಷರಿಯತ್ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸ್ ಮಾತನಾಡಿ, ‘ಇತಿಹಾಸ ಆಸಕ್ತಿಕರವಾಗಿದೆ. ಅದು ತನ್ನ ಗರ್ಭದಲ್ಲಿ ಅನೇಕ ವಿಚಾರಧಾರೆಗಳನ್ನು ಒಳಗೊಂಡಿದ್ದು, ಇತಿಹಾಸ ಪಂಡಿತರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದರಿಂದ ಅದನ್ನು ಅರ್ಥೈಸಿಕೊಳ್ಳಬೇಕಾಗಿದೆ’ ಎಂದರು.

ಇತಿಹಾಸ ವಿಭಾಗದ ಸಂಯೋಜಕ ಡಾ.ಅಣ್ಣಯ್ಯ ತೈಲೂರು, ಪ್ರಾಧ್ಯಾಪಕರಾದ ಡಾ.ನಾಗವೇಣಿ, ಡಾ.ಕೋಮಲಾ, ಡಾ.ಶ್ರೀನಿವಾಸ್ ಮತ್ತು ಲಿಂಗರಾಜು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.