ಮೈಸೂರು: ‘ಕೇಂದ್ರ ಸರ್ಕಾರ ಎರಡು ವರ್ಷದಿಂದ ಕಬ್ಬಿನ ಎಫ್‌ಆರ್‌ಪಿ ದರ ಏರಿಕೆ ಮಾಡದಿರುವುದು ಅವೈಜ್ಞಾನಿಕವಾಗಿದೆ’ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಕಿಡಿಕಾರಿದ್ದಾರೆ.
‘ಶೇ 10 ಸಕ್ಕರೆ ಇಳುವರಿ ಬರುವ ಪ್ರತಿ ಟನ್ ಕಬ್ಬಿಗೆ ₹ 100 ಹೆಚ್ಚಿಸಿ, ₹ 2850 ನಿಗದಿ ಪಡಿಸಲಾಗಿದೆ. ಇದು ಕಬ್ಬು ಬೆಳೆಗಾರರಿಗೆ ಹೊಡೆತವಾಗಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಪ್ರತಿ ಟನ್ ಕಬ್ಬಿನ ಉತ್ಪಾದನಾ ವೆಚ್ಚ ₹ 3200 ಆಗಲಿದೆ. ಇದನ್ನು ಪರಿಗಣಿಸದೆ, ಕಬ್ಬಿಗೆ ನ್ಯಾಯೋಚಿತ ಬೆಲೆ ನಿಗದಿ ಮಾಡಿರುವುದು ಅನ್ಯಾಯವಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ದರವನ್ನು ಪುನರ್ ಪರಿಶೀಲಿಸಿ, ಎಸ್‌ಎಪಿ ಕಾಯ್ದೆಯಡಿ ಹೆಚ್ಚುವರಿ ಬೆಲೆ ನಿಗದಿ ಪಡಿಸಿ, ಕಬ್ಬಿನ ಬೆಳೆಗಾರರನ್ನು ರಕ್ಷಿಸಬೇಕು’ ಎಂದು ಕುರಬೂರು ಆಗ್ರಹಿಸಿದ್ದಾರೆ.
‘ಹಲವು ಕಾರ್ಖಾನೆಗಳು ಬೆಳೆಗಾರರಿಗೆ ಇನ್ನೂ ಕಬ್ಬಿನ ಬಾಕಿ ಪಾವತಿಸಿಲ್ಲ. ಸಕ್ಕರೆ ಸಚಿವರು ಇತ್ತ ಗಮನ ಹರಿಸಬೇಕು. ಜೊತೆಗೆ ಕಬ್ಬಿನ ಬೆಳೆಯನ್ನು ಫಸಲ್ ಬೀಮಾ ಬೆಳೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.