ADVERTISEMENT

ಟೇಬಲ್ ಟೆನಿಸ್‌: ಸಹನಾ, ರೋಹಿತ್‌ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 21:16 IST
Last Updated 19 ಜುಲೈ 2024, 21:16 IST
ಪ್ರಶಸ್ತಿ ಗೆದ್ದ ಸಹನಾ ಎಚ್‌.ಮೂರ್ತಿ, ರೋಹಿತ್ ಶಂಕರ್ ಹಾಗೂ ತನಿಷ್ಕಾ ಕಪಿಲ್ ಕಾಲಭೈರವ್‌
ಪ್ರಶಸ್ತಿ ಗೆದ್ದ ಸಹನಾ ಎಚ್‌.ಮೂರ್ತಿ, ರೋಹಿತ್ ಶಂಕರ್ ಹಾಗೂ ತನಿಷ್ಕಾ ಕಪಿಲ್ ಕಾಲಭೈರವ್‌   

ಮೈಸೂರು: ಬೆಂಗಳೂರಿನ ಸಹನಾ ಎಚ್‌.ಮೂರ್ತಿ ಹಾಗೂ ರೋಹಿತ್‌ ಶಂಕರ್‌ ಅವರು ಇಲ್ಲಿ ನಡೆಯುತ್ತಿರುವ ಮೂರನೇ ರಾಜ್ಯ ರ‍್ಯಾಂಕಿಂಗ್‌ ಟೇಬಲ್ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳಾ ಹಾಗೂ ‍ಪುರುಷರ ಸಿಂಗಲ್ಸ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಮೈಸೂರು ಜಿಲ್ಲಾ ಟೇಬಲ್‌ ಟೆನಿಸ್‌ ಸಂಸ್ಥೆಯು ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಷಿಯಂ ಹಾಲ್‌ನಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸಹನಾ ಮೂರ್ತಿ ಅವರು ದೇಶ್ನಾ ಎಂ.ವಂಶಿಕಾ ಅವರನ್ನು 6 -11, 11 -5, 11-8, 12-10, 4-11, 5-11, 11-9ರಿಂದ ಮಣಿಸಿ ಪ್ರಶಸ್ತಿ ಗೆದ್ದರು.

ಸೆಮಿಫೈನಲ್‌ನಲ್ಲಿ ಸಹನಾ ಅವರು ಪ್ರೇಕ್ಷಾ ತಿಲಾವತ್ ಹಾಗೂ ದೇಶ್ನಾ ಅವರು ಖುಷಿ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು. 

ADVERTISEMENT

ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಬೆಂಗಳೂರಿನ ರೋಹಿತ್ ಶಂಕರ್‌ ಅವರು ರೈಲ್ವೇಸ್‌ನ ಎಂ.ಕಲೈವಣ್ಣನ್‌ ಅವರನ್ನು 9-11 , 4-11, 11-5 , 7-11 ,11-5, 11-8, 11-5ರಿಂದ ಮಣಿಸಿ ಚಾಂಪಿಯನ್ ಆದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್‌ನಲ್ಲಿ ರೋಹಿತ್‌ ಅವರು ಆಕಾಶ್‌ ಅವರನ್ನು, ಕಲೈವಣ್ಣನ್ ಅವರು ಯಶವಂತ್ ಅವರನ್ನು ಮಣಿಸಿ ಅಂತಿಮಘಟ್ಟ ಪ್ರವೇಶಿಸಿದ್ದರು.

17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಫೈನಲ್‌ನಲ್ಲಿ ಬೆಳಗಾವಿಯ ತನಿಷ್ಕಾ ಕಪಿಲ್ ಕಾಲಭೈರವ್‌ ಅವರು 11-4, 11-8, 11-9ರಿಂದ ಬೆಂಗಳೂರಿನ ಹಿಮಾಂಶಿ ಚೌಧರಿ ಅವರನ್ನು ಸುಲಭವಾಗಿ ಮಣಿಸಿ ಪ್ರಶಸ್ತಿ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.