ADVERTISEMENT

ಕಂದಾಯ ವಸೂಲಾತಿಗೆ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 12:41 IST
Last Updated 24 ಡಿಸೆಂಬರ್ 2019, 12:41 IST

ಮೈಸೂರು: ಪಾಲಿಕೆಗೆ ಬಾಕಿ ಉಳಿಸಿಕೊಂಡಿರುವ ಕಂದಾಯ ವಸೂಲಾತಿಗೆ ಅಧಿಕಾರಿಗಳು ಅಭಿಯಾನ ಆರಂಭಿಸಿದ್ದಾರೆ.

‘ಮೈಸೂರು ಹೋಟೆಲ್ ಕಾಂಪ್ಲೆಕ್ಸ್‌ ₹ 82 ಲಕ್ಷದಷ್ಟು ಕಂದಾಯ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಇದರ ವಸೂಲಾತಿಗಾಗಿ ಸೋಮವಾರ ಜಪ್ತಿ ಮಾಡುವ ಕಾರ್ಯ ನಡೆಸಲಾಯಿತು. ಸುಮಾರು 30 ನಿಮಿಷಗಳಷ್ಟು ಕಾಲ ಹೋಟೆಲ್‌ನ್ನು ಬಂದ್ ಮಾಡಲಾಯಿತು. ಇಷ್ಟು ಹಣಕ್ಕೆ ಚೆಕ್ ನೀಡಿದ ಬಳಿಕ ಹೋಟೆಲ್‌ನ್ನು ಮುಕ್ತಗೊಳಿಸಲಾಯಿತು’ ಎಂದು ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಕುಮಾರ್‌ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ಇನ್ನು ಮುಂದೆ ಇಂತಹ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗುವುದು. ಬಾಕಿ ಉಳಿಸಿಕೊಂಡಿರುವವರು ಶೀಘ್ರದಲ್ಲಿ ಕಂದಾಯ ಪಾವತಿಸಬೇಕು. ಇಲ್ಲದಿದ್ದರೆ ಜಪ್ತಿ ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಈ ಕಾರ್ಯಾಚರಣೆಯಲ್ಲಿ ಕುಮಾರ್‌ನಾಯಕ ಅವರ ಜತೆಗೆ, ಪಾಲಿಕೆಯ ವಲಯ ಕಚೇರಿಯ ಉಪ ಆಯುಕ್ತರಾದ ಗೀತಾ, ಅಭಯ ರಕ್ಷಣಾ ತಂಡದ ಸದಸ್ಯರೂ ಸೇರಿದಂತೆ ಒಟ್ಟು 25 ಮಂದಿ ಸಿಬ್ಬಂದಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.