ತಿ.ನರಸೀಪುರ (ಮೈಸೂರು): ತಾಲ್ಲೂಕಿನ ಮೂಗೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬಸ್‌ಗಾಗಿ ಕಾದು ನಿಂತಿದ್ದವರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ದ್ವಿಚಕ್ರ ವಾಹನ ಸವಾರ ಸೇರಿದಂತೆ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಕರೋಹಟ್ಟಿ ಗ್ರಾಮದ ಬಸವರಾಜು ಅಲಿಯಾಸ್ ಬಸವಣ್ಣ, ಮೂಗೂರು ಹೊಸಳ್ಳಿ ಗ್ರಾಮದ ಚಿಕ್ಕಮ್ಮ ಹಾಗೂ ಚಾಮರಾಜನಗರ ತಾಲ್ಲೂಕು ಉಮ್ಮತ್ತೂರು ಗ್ರಾಮದ ಗೋವಿಂದಶೆಟ್ಟಿ ಮೃತಪಟ್ಟವರು.
ಬಸ್ ನಿಲಾಣದಲ್ಲಿ ನಿಂತಿದ್ದ ಮಹದೇವಶೆಟ್ಟಿ ಹಾಗೂ ಡಿಕ್ಕಿ ಹೊಡೆದ ಬೈಕ್ ಸವಾರ ಕೇರಳ ಮೂಲದ ಸಲ್ಮಾನ್ ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿ.ನರಸೀಪುರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.