ADVERTISEMENT

ಹುಲಿ ಪತ್ತೆಗೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2019, 7:27 IST
Last Updated 7 ಸೆಪ್ಟೆಂಬರ್ 2019, 7:27 IST
ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಪತ್ತೆಗೆ ಶುಕ್ರವಾರ ಕಾರ್ಯಾಚರಣೆ ಆರಂಭಿಸಿದರು
ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಪತ್ತೆಗೆ ಶುಕ್ರವಾರ ಕಾರ್ಯಾಚರಣೆ ಆರಂಭಿಸಿದರು   

ಹುಣಸೂರು: ತಾಲ್ಲೂಕಿನ ನೇರಳಕುಪ್ಪೆ ಸಮೀಪದ ಕೆ.ಜಿ. ಹೆಬ್ಬನಕುಪ್ಪೆ ಎಸ್ಟೇಟ್‍ನಲ್ಲಿ ಹುಲಿ ಕಾಣಿಸಿಕೊಂಡಿದ್ದು, ಶುಕ್ರವಾರ ಪತ್ತೆ ಕಾರ್ಯ ಆರಂಭವಾಗಿದೆ.

ಇಲ್ಲಿನ ತರಗನ್ ಮಾವಿನ ಎಸ್ಟೇಟ್‍ನಲ್ಲಿ ಹಸುವೊಂದನ್ನು ಗುರುವಾರವಷ್ಟೇ ಹುಲಿ ತಿಂದು ಹಾಕಿತ್ತು. ಇದಕ್ಕೆ ಪೂರಕವಾಗಿ ಹಸು ದೇಹ ಸಿಕ್ಕ ಪ್ರದೇಶದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಹುಣಸೂರು ವಲಯ ಅರಣ್ಯಾಧಿಕಾರಿ ಹನುಮಂತರಾಜು ಪರಿಶೀಲನೆ ನಡೆಸಿ, ಸಾಕಾನೆಗಳಾದ ಬಲರಾಮ, ಗಣೇಶರನ್ನು ಕರೆಸಿ ಕೂಬಿಂಗ್ ಆರಂಭಿಸಿದ್ದಾರೆ.

ADVERTISEMENT

ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿಯೂ ಇಲ್ಲಿ ಹುಲಿ ಕಾಣಿಸಿಕೊಂಡು ಸಾಕಷ್ಟು ಜಾನುವಾರುಗಳನ್ನು ಆಹುತಿ ಪಡೆದು ಆತಂಕ ಸೃಷ್ಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.