ADVERTISEMENT

ಕಾಕನಕೋಟೆ ಸಫಾರಿ ದಾರಿಯಲ್ಲಿ ಹುಲಿ–ಮರಿಗಳ ದರ್ಶನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 16:32 IST
Last Updated 11 ಸೆಪ್ಟೆಂಬರ್ 2022, 16:32 IST
ಎಚ್‌.ಡಿ. ಕೋಟೆ ಕಬಿನಿ ಬಳಿ ಕಾಣಿಸಿಕೊಂಡ ಹುಲಿ-ಮರಿಗಳು
ಎಚ್‌.ಡಿ. ಕೋಟೆ ಕಬಿನಿ ಬಳಿ ಕಾಣಿಸಿಕೊಂಡ ಹುಲಿ-ಮರಿಗಳು   

ಎಚ್.ಡಿ.ಕೋಟೆ (ಮೈಸೂರು): ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ವನ್ಯಜೀವಿ ವಲಯದ ‘ಕಾಕನಕೋಟೆ ಸಫಾರಿ’ ಮಾರ್ಗಗಗಳಲ್ಲಿ 4 ಮರಿಗಳನ್ನು ಹೊಂದಿರುವ ಎರಡು ತಾಯಿ ಹುಲಿಗಳು ಕಂಡುಬಂದಿದೆ.

ತಾರಕಾ ಜಲಾಶಯದ ಹಿನ್ನೀರಿನ ಬಳಿಯ ಹುಲಿಯೊಂದು ವರ್ಷದ ಹಿಂದೆ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಕಬಿನಿ ಹಿನ್ನೀರಿನ ಬಳಿ ಇನ್ನೊಂದು ಹುಲಿ ನಾಲ್ಕು ತಿಂಗಳ ಹಿಂದೆ ನಾಲ್ಕು ಹುಲಿ ಮರಿಗಳಿಗೆ ಜನ್ಮನೀಡಿದೆ. ಸಫಾರಿಗೆ ತೆರಳಿದ್ದಾಗ ಕಬಿನಿ ಹಿನ್ನೀರಿನ ಬಳಿಯ ತಾಯಿ ಹುಲಿಯು ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಂಡಿದ್ದಕ್ಕೆ ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರಸಂತೆ ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವಲಯಗಳು ಪ್ರಾಣಿ ಪ್ರಿಯರಿಗೆ ನಿತ್ಯ ಹೊಸ ನೋಟ ನೀಡುತ್ತಿವೆ. ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಮಳೆ ಅಡ್ಡಿಯಾಗಿಲ್ಲ.

ADVERTISEMENT

ವನ್ಯಜೀವಿಗಳ ಛಾಯಾಗ್ರಾಹಣಕ್ಕೆ ಬರುವ ಪ್ರವಾಸಿಗರು ತಾರಕಾ ಜಲಾಶಯದ ಹಿನ್ನೀರಿನ ಬಳಿ ಹೆಚ್ಚು ಕಾಣುವ ಹುಲಿಗೆ ‘ರೋಸ್‌ಲೈನ್‌’ ಎಂದೂ, ಕಬಿನಿ ಹಿನ್ನೀರಿನ ಬಳಿ ಕಾಣುವ ಹುಲಿಗೆ ‘ಕಬಿನಿ ಬ್ಯಾಕ್ ವಾಟರ್ ಫಿಮೇಲ್’ ಎಂದು ನಾಮಕರಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.