ADVERTISEMENT

ಹುಲಿ ಹತ್ಯೆ ಪ್ರಕರಣ; ಮತ್ತಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 9:00 IST
Last Updated 5 ಸೆಪ್ಟೆಂಬರ್ 2020, 9:00 IST
ಹುಣಸೂರಿನ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಆ. 26ರಂದು ನಡೆದ ಹುಲಿ ಹತ್ಯೆಗೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳೊಂದಿಗೆ ಕಾರ್ಯಾಚರಣೆ ನಡೆಸಿದ ತಂಡ
ಹುಣಸೂರಿನ ನಾಗರಹೊಳೆ ಹುಲಿ ರಕ್ಷಿತಾರಣ್ಯದಲ್ಲಿ ಆ. 26ರಂದು ನಡೆದ ಹುಲಿ ಹತ್ಯೆಗೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳೊಂದಿಗೆ ಕಾರ್ಯಾಚರಣೆ ನಡೆಸಿದ ತಂಡ   

ಹುಣಸೂರು: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಕಲ್ಲಹಳ್ಳ ವಲಯದಲ್ಲಿ ಆ .26ರಂದು ನಡೆದ ಹುಲಿ ಹತ್ಯೆ ಪ್ರಕರಣಕ್ಕೆ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 5ಕ್ಕೆ ಏರಿದೆ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದರು.

ಅರಣ್ಯದಲ್ಲಿ ಹುಲಿಯನ್ನು ಹತ್ಯೆ ಮಾಡಿದ ಆರೋಪಿ ಸಂತೋಷ್ ನೀಡಿದ ಮಾಹಿತಿ ಮೇಲೆ ಶ್ವಾನದಳ ಬಳಸಿ ಇತರೆ ನಾಲ್ವರು ಆರೋಪಿಗಳನ್ನು ‍ಬಂಧಿಸಲಾಯಿತು ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ತಟ್ಟೆಕರೆ ಹಾಡಿಯ ಸಂತೋಷ್, ಸುಳುಗೋಡು ಗ್ರಾಮದ ಕಾಂಡೇರ ಶಶಿ, ಕೆ.ಪಿ.ಉತ್ತಪ್ಪ, ನಿಟ್ಟೂರು ಗ್ರಾಮದ ವಟ್ಟಂಗಡ ರಂಜು ಹಾಗೂ ಕೆ.ಎನ್.ರಾಜು ಬಂಧಿತರು.

ADVERTISEMENT

ಆರೋಪಿಗಳಿಂದ ಹುಲಿಯ 13 ಉಗುರು ಹಾಗೂ 2 ಕೋರೆ ಹಲ್ಲು ಸೇರಿದಂತೆ 2 ಬೈಕ್ ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಈ ಪೈಕಿ ಕೆ.ಎನ್ ರಾಜು ಹತ್ತು ವರ್ಷದ ಹಿಂದೆ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.