ಮೈಸೂರು: ಕೇಂದ್ರ ಲೋಕಸೇವಾ ಆಯೋಗದಿಂದ (ಯುಪಿಎಸ್‌ಸಿ) ಭಾನುವಾರ ಇಲ್ಲಿನ 13 ಕೇಂದ್ರಗಳಲ್ಲಿ ನಡೆಸಿದ ಪರೀಕ್ಷೆ ಸುಗಮವಾಗಿ ಜರುಗಿತು.
ನಗರದಲ್ಲಿ ಒಟ್ಟು 4,727 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಬೆಳಿಗ್ಗೆಯ ಅವಧಿಯಲ್ಲಿ 2,929 ಮಂದಿ ಹಾಜರಾಗಿದ್ದರು. 1,798 ಮಂದಿ ಗೈರು ಹಾಜರಾಗಿದ್ದರು.
ಮಧ್ಯಾಹ್ನದ ಅವಧಿಯಲ್ಲಿ 2,916 ಅಭ್ಯರ್ಥಿಗಳು ಹಾಜರಾದರೆ, 1,811 ಮಂದಿ ಗೈರಾದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
‘ಪರೀಕ್ಷೆಯನ್ನು ಯುಪಿಎಸ್‌ಸಿ ನಿರ್ದೇಶನದಂತೆ ಯಾವುದೇ ಲೋಪ–ದೋಷಗಳಿಲ್ಲದಂತೆ ಸಮರ್ಪಕವಾಗಿ ನಡೆಸಲಾಯಿತು’ ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.