ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆಯ ಮೇಲಿನ ದಾಳಿ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮುಖಂಡ ಪುರುಷೋತ್ತಮ, ಅಸ್ಪೃಶ್ಯತೆಯ ಕೂಪವಾಗಿದ್ದ ಭಾರತಕ್ಕೆ ಬೆಳಕು ನೀಡುವ ಸಂವಿಧಾನವನ್ನು ನೀಡಿದ್ದು ಅಂಬೇಡ್ಕರ್. ಇದರಿಂದಾಗಿ ಭಾರತ ಮನುವಾದಿ ಹಿಂದೂ ರಾಷ್ಟ್ರವಾಗುವುದು ತಪ್ಪಿತು. ಹೀಗಾಗಿ, ಮನುವಾದಿಗಳಿಗೆ ಇವರ ಮೇಲೆ ದ್ವೇಷ ಇದೆ’ ಎಂದರು.
ಅಂಬೇಡ್ಕರ್ ನಿವಾಸದ ಮೇಲೆ ದಾಳಿ ನಡೆಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಪಾಲಿಕೆ ಸದಸ್ಯ ಸುನಂದಕುಮಾರ್, ಮುಖಂಡರಾದ ವಿಜಯನಗರ ಅಶೋಕ್, ರೇವಣ್ಣ, ಪ್ರದೀಪ್‍ಕುಮಾರ್, ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.