ADVERTISEMENT

ಹುಣಸೂರು: ವಾಕಿಂಗ್‌ ಪಾತ್‌, ಆಸನ ಧ್ವಂಸ

ನಗರಸಭೆ ಮೈದಾನ: ನಗರೋತ್ಥಾನ ಯೋಜನೆಯಲ್ಲಿ ನಿರ್ಮಾಣ; ಲಾಕ್‌ಡೌನ್‌ ಸಂದರ್ಭದಲ್ಲಿ ಕಿಡಿಗೇಡಿಗಳ ಕೃತ್ಯ

ಎಚ್.ಎಸ್.ಸಚ್ಚಿತ್
Published 19 ಜೂನ್ 2021, 3:50 IST
Last Updated 19 ಜೂನ್ 2021, 3:50 IST
ಹುಣಸೂರು ನಗರಸಭೆಯ ಮೈದಾನದಲ್ಲಿ ಇರಿಸಿರುವ ಆಸನಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವುದು
ಹುಣಸೂರು ನಗರಸಭೆಯ ಮೈದಾನದಲ್ಲಿ ಇರಿಸಿರುವ ಆಸನಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವುದು   

ಹುಣಸೂರು: ನಗರದ ಮಧ್ಯ ಭಾಗದಲ್ಲಿರುವ ನಗರಸಭೆ ಮೈದಾನದಲ್ಲಿ ನಗರೋತ್ಥಾನ ಯೋಜನೆಯಲ್ಲಿ ನಿರ್ಮಿಸಿರುವ ವಾಕಿಂಕ್ ಪಾತ್‌ ಮತ್ತು ಆಸನಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ನಗರಸಭೆ 2013ರ ನಗರೋತ್ಥಾನ ಯೋಜನೆಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಭೂಮಿ ಸಮತಟ್ಟು ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಒಟ್ಟು ₹ 12 ಲಕ್ಷ ವೆಚ್ಚದಲ್ಲಿ ವಾಕಿಂಗ್ ಪಾಥ್ ಮತ್ತು ವಿಶ್ರಮಿಸಲು ಗ್ರಾನೈಟ್‌ ಆಸನಗಳನ್ನು ಅಳವಡಿಸಿದ್ದರು.

ವಾಯುವಿಹಾರಕ್ಕೆ ಬರುವ ಮಹೇಶ್ ಮಾತನಾಡಿ, ಕೊರೊನಾ ಲಾಕ್‌ಡೌನ್‌ನಿಂದಾಗಿ ಉದ್ಯಾನಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ರುವುದರಿಂದ ಕಿಡಿಗೇಡಿ ಗಳು ಸಾರ್ವ ಜನಿಕ ಸ್ವತ್ತುಗಳನ್ನು ಧ್ವಂಸಗೊಳಿಸಿದ್ದಾರೆ. ನಗರ ಪೊಲೀಸ್ ಸಿಬ್ಬಂದಿ ಗಸ್ತು ತಿರುಗಿದರೆ ಈ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎಂದರು.

ADVERTISEMENT

ನಗರಸಭೆ ವ್ಯಾಪ್ತಿಯಲ್ಲಿ ಉದ್ಯಾನಕ್ಕೆ ಹೊಂದಿಕೊಂಡಂತೆ ರೋಟರಿ ವೃತ್ತದಲ್ಲಿ ಹಾಕಿರುವ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಇಲ್ಲದೆ ಕಾರ್ಯನಿರ್ವಹಿಸುತ್ತಿಲ್ಲ. ಇದು ಕಿಡಿಗೇಡಿಗಳ ದುಷ್ಕೃತ್ಯಕ್ಕೆ ನೆರವಾದಂತಾಗಿದೆ. ಸಾರ್ವಜನಿಕ ಸ್ವತ್ತುಗಳನ್ನು ಧ್ವಂಸಗೊಳಿಸಿರುವುದು ಖಂಡನೀಯ. ಮೈದಾನದಲ್ಲಿರುವ ಹೈಮಾಸ್ಕ್ ದೀಪ ದುರಸ್ತಿಗೊಳಿಸಬೇಕು ಎಂದು ಸತ್ಯ ಫೌಂಡೇಷನ್ ಅಧ್ಯಕ್ಷ ಸತ್ಯಪ್ಪ ಒತ್ತಾಯಿಸಿದರು.

ನಗರಸಭೆ ಪೌರಾಯುಕ್ತ ರಮೇಶ್ ಪ್ರತಿಕ್ರಿಯಿಸಿ, ಕಿಡಿಗೇಡಿಗಳು ಆಸನಗಳನ್ನು ಧ್ವಂಸ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿ ಕ್ರಮವಹಿಸಲಾಗುವುದು. ನಗರದ ಸಾರ್ವಜನಿಕರಿಗೆ ಅನುಕೂಲವಾಗಲು ನಗರೋತ್ಥಾನ ಯೋಜನೆಯಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಭೂಮಿ ಸಮತಟ್ಟು, 15ನೇ ಹಣಕಾಸು ಯೋಜನೆಯಲ್ಲಿ ಮೈದಾನದ ಸುತ್ತಲೂ ₹ 12 ಲಕ್ಷ ವೆಚ್ಚದಲ್ಲಿ ವಾಕಿಂಗ್ ಪಾಥ್ ಮತ್ತು ಗ್ರಾನೈಟ್‌ ಆಸನಗಳಿಗೆ ತಲಾ ₹ 9 ಸಾವಿರ ವೆಚ್ಚ ಮಾಡಲಾಗಿದೆ ಎಂದರು.

ಉದ್ಯಾನದ ಸೌಂದರ್ಯ ಹೆಚ್ಚಿಸಲು ಬೆಂಗಳೂರಿನ ಲಾಲ್‌ಬಾಗ್‌ನಿಂದ ವಿವಿಧ ಜಾತಿಯ ಹೂವಿನ ಮರಗಳನ್ನು ಬೆಳೆಸಲಾಗಿದೆ. ಅವುಗಳಿಗೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಮೈದಾನದ ಸುತ್ತಲೂ ದೀಪ ಅಳವಡಿಸಬೇಕಿದ್ದು, ಅನುದಾನ ಕೊರತೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.