ADVERTISEMENT

ಪಾಲಿಕೆ ಸದಸ್ಯರು ಸೂಚಿಸಿದವರಿಗೆ ವಾರ್ಡ್ ಸಮಿತಿ ಸದಸ್ಯ ಸ್ಥಾನ: ಮಾಳವಿಕಾ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 7:20 IST
Last Updated 11 ಆಗಸ್ಟ್ 2021, 7:20 IST
   

ಮೈಸೂರು: ಪಾಲಿಕೆ ಸದಸ್ಯರು ಸೂಚಿಸಿದವರನ್ನು ವಾರ್ಡ್ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡುವುದು ಸರಿಯಲ್ಲ ಎಂದು ಜಾಗೃತ ನಾಗರಿಕರ ವೇದಿಕೆಯ ಸಂಚಾಲಕಿ ಮಾಳವಿಕಾ ಗುಬ್ನಿವಾಣಿ ಆಕ್ಷೇಪ ವ್ಯಕ್ತಪಡಿಸಿದರು.

ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ವಾರ್ಡ್ ಸಮಿತಿ ರಚನೆ ಮಾಡಬೇಕಾಗಿದೆ. ಆದರೆ, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ಪಾಲಿಕೆ ಸದಸ್ಯರನ್ನೆ ಸಮಿತಿ ಸದಸ್ಯರ ನೇಮಕಕ್ಕೆ ಶಿಫಾರಸು ಪಟ್ಟಿ ನೀಡಿ ಎಂದು ಕೇಳಿರುವುದು ಸರಿಯಲ್ಲ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.

ಪಾಲಿಕೆ ಸದಸ್ಯರು ಶಿಫಾರಸು ಮಾಡಿದವರನ್ನು ವಾರ್ಡ್ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಿದರೆ ಇಂತಹ ಸಮಿತಿಯಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು.

ADVERTISEMENT

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಅನುಸರಿಸಿದ ಮಾದರಿಯಲ್ಲೇ ವಾರ್ಡ್ ಸಮಿತಿ ರಚಿಸಬೇಕು ಎಂದು ಅವರು ಒತ್ತಾಯಿಸಿದರು.

ಆಸಕ್ತ ನಾಗರಿಕರ ತಾವೂ ವಾರ್ಡ್ ಸಮಿತಿ ಸದಸ್ಯರಾಗಬೇಕು ಕೋರಿ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಬೇಕು. ಸಮಿತಿ ಸದಸ್ಯರ ಆಯ್ಕೆಯಲ್ಲಿ ಪಾಲಿಕೆ ಸದಸ್ಯರ ಪಾತ್ರವನ್ನು ಗೌಣವಾಗಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.