ಮೈಸೂರು: ‘ಕೈಗಳನ್ನು ಸ್ವಚ್ಛವಾಗಿಟ್ಟರೆ ಕೀಟಾಣುಗಳಿಂದ ದೂರವಿರಲು ಸಾಧ್ಯ’ ಎಂದು ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ.ಮಧು ತಿಳಿಸಿದರು.
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಕೈ ನೈರ್ಮಲ್ಯ ದಿನ ಉದ್ಘಾಟಿಸಿ ಮಾತನಾಡಿ, ‘ಕೀಟಾಣುಗಳು ಕೈಗಳ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಹೀಗಾಗಿ ಕೈಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆಸ್ಪತ್ರೆಯ ಎಲ್ಲಾ ವಿಭಾಗದಲ್ಲಿ ನೈರ್ಮಲ್ಯ ಕಾಪಾಡುವಂತೆ ನಮ್ಮ ಮನೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಸೋಂಕು ನಿಯಂತ್ರಣ ಉತ್ಪನ್ನಗಳನ್ನು ನೀಡಿ ಅದರಿಂದ ಹೇಗೆ ಕೈಗಳನ್ನು ಸ್ವಚ್ಛತೆ ಮಾಡಬಹುದು ಎಂಬ ಬಗ್ಗೆ ಡಾ.ಪಲ್ಲವಿ ಹಾಗೂ ದೀಪಕ್ ಅವರ ತಂಡ ಪ್ರಾತ್ಯಕ್ಷಿಕೆ ನೀಡಿತು.
ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಉಪಪ್ರಾಂಶುಪಾಲ ಡಾ.ಮಾಂತಪ್ಪ, ಆಸ್ಪತ್ರೆಯ ಉಪನಿರ್ದೇಶಕ ಡಾ.ಜಿ.ವಿ.ಮಂಜುನಾಥ್, ಸೋಂಕು ನಿವಾರಣಾ ಸಮಿತಿಯ ಮುಖ್ಯಸ್ಥೆ ಡಾ.ರಶ್ಮಿ ಪಿ. ಮಹಾಲೆ, ಆಡಳಿತಾಧಿಕಾರಿ ಲೋಕೇಶ್ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.