ADVERTISEMENT

ಬೆಟ್ಟದಪುರ | ‘ದೇಹ, ಮನಸ್ಸು ಸಮತೋಲನಕ್ಕೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:31 IST
Last Updated 22 ಜೂನ್ 2025, 14:31 IST
ಬೆಟ್ಟದಪುರ ಸಮೀಪದ ಕೊಣಸೂರಿನ ಆಯುಷ್ ಕೇಂದ್ರದಿಂದ ಶಾಲೆಯ ಆವರಣದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಶಾ ಮಹದೇವರಾವ್ ಉದ್ಘಾಟಿಸಿದರು
ಬೆಟ್ಟದಪುರ ಸಮೀಪದ ಕೊಣಸೂರಿನ ಆಯುಷ್ ಕೇಂದ್ರದಿಂದ ಶಾಲೆಯ ಆವರಣದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಆಶಾ ಮಹದೇವರಾವ್ ಉದ್ಘಾಟಿಸಿದರು   

ಬೆಟ್ಟದಪುರ: ಯೋಗ ಎಂಬುದು ಪ್ರಾಚೀನ ಭಾರತೀಯ ಶಾಸ್ತ್ರೀಯ ವಿಧಾನವಾಗಿದೆ. ದೇಹ, ಮನಸ್ಸು ಮತ್ತು ಆತ್ಮದ ಸಮತೋಲನ ಸಾಧಿಸಲು ಸಹಾಯ ಮಾಡುವ ಅಭ್ಯಾಸವಾಗಿದೆ ಎಂದು ಎಂದು ಕೊಣಸೂರು ಆಯುಷ್ ಕೇಂದ್ರದ ಯೋಗತರಬೇತುದಾರ ಆಶಾ ಮಹದೇವರಾವ್ ಹೇಳಿದರು.

ಸಮೀಪದ ಕೊಣಸೂರು ಗ್ರಾಮದ ಆಯುಷ್ ಕೇಂದ್ರದಿಂದ ಶಾಲೆಯ ಆವರಣದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಯೋಗಾಭ್ಯಾಸವನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು. ಯೋಗವು ದೇಹದ ಅರೋಗ್ಯದ ಜತೆಗೆ ಮಾನಸಿಕ ಆಧ್ಯಾತ್ಮಿಕ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಕೊಣಸೂರು ಆಯುರ್ವೇದ ಆಸ್ಪತ್ರೆಯ ವೈದ್ಯ ದಿನೇಶ್ ಮಾತನಾಡಿದರು. ಭುವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವಿತ್ರಾ, ಉಪಾಧ್ಯಕ್ಷೆ ಮಮತಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಆನಂದ್, ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸರೋಜಮ್ಮ, ಎಸ್‌ಡಿಎಂಸಿ ಸದಸ್ಯರಾದ ಪ್ರಭು, ಸತೀಶ್, ಕೆ.ಸಿ.ಸತೀಶ್, ಗ್ರಾಮದ ಮುಖಂಡರಾದ ವೀರಪ್ಪ, ರವಿ, ರಾಜಪ್ಪ, ಶಿವಣ್ಣ, ರಾಣಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.