ADVERTISEMENT

ಲಸಿಕೆ ಪಡೆಯಲು ರಾಜ್ಯದಲ್ಲಿ ಶೇ 22ರಷ್ಟು ಮಂದಿ ಮಾತ್ರ ಹಾಜರಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 19:20 IST
Last Updated 9 ಫೆಬ್ರುವರಿ 2021, 19:20 IST
ಕೊರೊನಾ‌ ವಾರಿಯರ್‌ ಒಬ್ಬರಿಗೆ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತೆ
ಕೊರೊನಾ‌ ವಾರಿಯರ್‌ ಒಬ್ಬರಿಗೆ ಲಸಿಕೆ ಹಾಕುತ್ತಿರುವ ಆರೋಗ್ಯ ಕಾರ್ಯಕರ್ತೆ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಪ‍ಡೆಯಲು ಮಂಗಳವಾರ ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ ಶೇ 22ರಷ್ಟು ಮಂದಿ ಮಾತ್ರ ಹಾಜರಾಗಿದ್ದಾರೆ.

ಉತ್ತರ ಕನ್ನಡ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಸಿಕೆ ವಿತರಣೆ ಅಭಿಯಾನ ನಡೆದಿದೆ. 29 ಜಿಲ್ಲೆಗಳಲ್ಲಿನ 630 ಕೇಂದ್ರಗಳಲ್ಲಿ 1.22 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿತ್ತು.

ಈವರೆಗೆ ದಿನವೊಂದಕ್ಕೆ ಗುರುತಿಸ ಲಾದ ಗರಿಷ್ಠ ಫಲಾನುಭವಿಗಳ ಸಂಖ್ಯೆ ಇವಾಗಿವೆ. ಇದರಲ್ಲಿ ಆರೋಗ್ಯ ಕಾರ್ಯಕರ್ತರ ಜತೆಗೆ ಕೋವಿಡ್‌ ಮುಂಚೂಣಿ ಯೋಧರು ಕೂಡ ಸೇರಿದ್ದಾರೆ. ನಿಗದಿಪಡಿಸಲಾಗಿದ್ದ ಫಲಾನುಭವಿಗಳಲ್ಲಿ 22,623 ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಉಳಿದವರು ಹಿಂಜರಿಕೆ ಸೇರಿದಂತೆ ನಾನಾ ಕಾರಣಗಳಿಂದ ಗೈರಾಗಿದ್ದಾರೆ.

ADVERTISEMENT

ಗದಗದಲ್ಲಿ ಶೇ 59ರಷ್ಟು, ಚಿಕ್ಕಮಗಳೂರಿನಲ್ಲಿ ಶೇ 55ರಷ್ಟು ಮಂದಿ ಹಾಜರಾಗಿದ್ದರು.

ಬೀದರ್, ಬಾಗಲಕೋಟೆ ಸೇರಿದಂತೆ 22 ಜಿಲ್ಲೆಗಳಲ್ಲಿ ಅರ್ಧಕ್ಕೂ ಅಧಿಕ ಮಂದಿ ಗೈರಾಗಿದ್ದರು.

ಕೋವಿಡ್‌ ಲಸಿಕೆ ಪಡೆದವರಲ್ಲಿ ಯಾವುದೇ ತೀವ್ರ ಮತ್ತು ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಜ.16ರಿಂದ ಈವರೆಗೆ ನಿಗದಿಪಡಿಸಲಾಗಿದ್ದ 10.83 ಲಕ್ಷ ಫಲಾನುಭವಿಗಳಲ್ಲಿ 4.41 ಲಕ್ಷ ಮಂದಿ ಹಾಜರಾಗಿ, ಲಸಿಕೆ ಹಾಕಿಸಿಕೊಂಡಿದ್ದಾರೆ. ನಿಗದಿಪಡಿಸ ಲಾಗಿದ್ದ ಫಲಾನುಭವಿಗಲ್ಲಿ ಶೇ 40.7ರಷ್ಟು ಮಂದಿ ಮಾತ್ರ ಹಾಜರಾಗಿ ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.