ADVERTISEMENT

'ಕೋವಿಡ್ ಬಳಿಕ ಪೂರ್ವಸಿದ್ಧತೆ’ ವೆಬಿನಾರ್ ಇಂದು

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 20:53 IST
Last Updated 18 ನವೆಂಬರ್ 2020, 20:53 IST

ಬೆಂಗಳೂರು: ‘ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್’ ಹಾಗೂ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ‘ಕೋವಿಡ್ ಬಳಿಕ ಸಿದ್ಧತೆಗಳು: ಪೋಷಕರು ಮತ್ತು ಮಕ್ಕಳು’ ಎಂಬುದರ ಕುರಿತು ಇದೇ 19ರಂದು ಸಂಜೆ 5 ಗಂಟೆಗೆ ವೆಬಿನಾರ್ ಆಯೋಜಿಸಲಾಗಿದೆ.

ಕೊರೊನಾದಿಂದದೇಶದಾದ್ಯಂತ ಸ್ತಬ್ಧಗೊಂಡಿದ್ದ ಚಟುವಟಿಕೆಗಳು ಒಂದೊಂದಾಗಿ ಗರಿಗೆದರಿವೆ. ಎಂಟು ತಿಂಗಳ ಬಳಿಕ ಶಾಲಾ-ಕಾಲೇಜುಗಳ ಬಾಗಿಲು ತೆರೆಯಲಾರಂಭಿಸಿವೆ. ಆದರೂ ಮಕ್ಕಳು ಮತ್ತು ಪೋಷಕರನ್ನು ಆತಂಕ-ಗೊಂದಲ ಹಿಡಿದಿಟ್ಟುಕೊಂಡಿದೆ.

ಇವುಗಳನ್ನು ದೂರ ಮಾಡುವ ಉದ್ದೇಶದಿಂದ ಆಯೋಜಿಸಿರುವ ವೆಬಿನಾರ್ ಕಾರ್ಯಕ್ರಮದಲ್ಲಿ ಕೋವಿಡ್ ನಂತರದ ಈ ಸಂದರ್ಭದಲ್ಲಿ ನಾವು ಮಾಡಿಕೊಳ್ಳಬೇಕಾದ ಸಿದ್ಧತೆಗಳೇನು? ಪೋಷಕರು ಅನುಸರಿಸಬೇಕಿರುವ ಕ್ರಮಗಳೇನು ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ADVERTISEMENT

ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯ ಮಕ್ಕಳ ಸಲಹೆಗಾರರಾದ ಡಾ.ಜ್ಞಾನಂ ಹಾಗೂ ಡಾ.ಜಗೀಶ್ ಚಿನ್ನಪ್ಪ ಅವರು ವೆಬಿನಾರ್‌ನಲ್ಲಿ ಮಾತನಾಡಲಿದ್ದಾರೆ. ಹೆಚ್ಚಿನ ಮಾಹಿತಿ ಪಡೆಯಲು ಇಚ್ಛಿಸುವವರು ಈ ವೆಬಿನಾರ್‌ನಲ್ಲಿ ಭಾಗವಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.