ADVERTISEMENT

ಅಕ್ರಮ ಮರಳು ಸಾಗಣೆ: 5 ಟಿಪ್ಪರ್‌ ವಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2014, 6:49 IST
Last Updated 8 ಫೆಬ್ರುವರಿ 2014, 6:49 IST
ಲಿಂಗಸುಗೂರು ಮಾರ್ಗವಾಗಿ  ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳನ್ನು ಜಪ್ತಿ ಮಾಡಿದ ತಹಶೀಲ್ದಾರ್‌ ಜಿ.ಎಸ್‌. ಮಹಾಜನ ನೇತೃತ್ವದ ತಂಡ ಪೊಲೀಸ್‌ ಉಪವಿಭಾಗ ಕಚೇರಿ ಸುಪರ್ದಿಗೆ ನೀಡಿದೆ
ಲಿಂಗಸುಗೂರು ಮಾರ್ಗವಾಗಿ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್‌ಗಳನ್ನು ಜಪ್ತಿ ಮಾಡಿದ ತಹಶೀಲ್ದಾರ್‌ ಜಿ.ಎಸ್‌. ಮಹಾಜನ ನೇತೃತ್ವದ ತಂಡ ಪೊಲೀಸ್‌ ಉಪವಿಭಾಗ ಕಚೇರಿ ಸುಪರ್ದಿಗೆ ನೀಡಿದೆ   

ಲಿಂಗಸುಗೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ನವಲಿ ಗ್ರಾಮದ ನಾಲಾದ ಮರಳನ್ನು ತಾಲ್ಲೂಕಿನ ಯಳಗುಂದಿ ಗ್ರಾಮದ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ 5 ಟಿಪ್ಪರ್‌ ಗಳನ್ನು ತಹಶೀಲ್ದಾರ್‌ ಜಿ.ಎಸ್‌. ಮಹಾಜನ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.

ಶುಕ್ರವಾರ ಲಿಂಗಸುಗೂರು ಮಾರ್ಗ­ವಾಗಿ ತೆರಳುತ್ತಿದ್ದ ಟಿಪ್ಪರ್‌ಗಳ ದಾಖಲೆ ಪರಿಶೀಲಿಸಿದಾಗ ಪರವಾನಗಿ ದಾಖಲೆ­ಳಲ್ಲಿ ಮರಳು ಕ್ವಾರಿ ಇರುವ ಗ್ರಾಮ ನವಲಿ ಎಂದು ನಮೂದಿಸಲಾಗಿದೆ. ಆದರೆ ಅದೇ ದಾಖಲೆಯಲ್ಲಿ ಈಚನಾಳ ಗ್ರಾಮದಿಂದ ಕೆಸರಟ್ಟಿ ಗ್ರಾಮಕ್ಕೆ
ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ದಾಖಲಿಸಿರುವುದು  ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಕಾರಣ ದಿಂದ ಟಿಪ್ಪರ್‌ಗಳನ್ನು ಜಪ್ತಿ ಮಾಡಿದ್ದಾಗಿ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆಗಳಲ್ಲಿನ ಮಾಹಿತಿ ಅಸ್ಪಷ್ಟವಾಗಿದ್ದು ಚಾಲಕರು ನೀಡುವ ಮಾಹಿತಿಗೆ ಹೊಂದಾಣಿಕೆ ಆಗುತ್ತಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗುವುದು ಎಂದು ಕಂದಾಯ ಮೂಲಗಳು ಸ್ಪಷ್ಟಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.