ADVERTISEMENT

ಅಪ್ರಾಳ: ಸಂತ್ರಸ್ತರಿಗೆ ಮನೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:25 IST
Last Updated 8 ಅಕ್ಟೋಬರ್ 2011, 10:25 IST
ಅಪ್ರಾಳ: ಸಂತ್ರಸ್ತರಿಗೆ ಮನೆ ಹಸ್ತಾಂತರ
ಅಪ್ರಾಳ: ಸಂತ್ರಸ್ತರಿಗೆ ಮನೆ ಹಸ್ತಾಂತರ   

ರಾಯಚೂರು: ದೇವದುರ್ಗ ತಾಲ್ಲೂಕು ಅಪ್ರಾಳ ಗ್ರಾಮದ ನೆರೆ ಸಂತ್ರಸ್ತರಿಗೆ ಸೇವಾ ಭಾರತಿ ಟ್ರಸ್ಟ್ ನಿರ್ಮಿಸಿದ 52 ಮನೆಗಳ ಹಸ್ತಾಂತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸೇವಾ ಭಾರತಿ ಟ್ರಸ್ಟ್ ವತಿಯಿಂದ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿದ ವಿಧಾನಪರಿಷತ್ ಮಾಜಿ ಸದಸ್ಯ ಕೃ.  ನರಹರಿ ಅವರು, ಎರಡು ವರ್ಷದ ಹಿಂದೆ ಈ ಭಾಗದಲ್ಲಿ ನೆರೆ ಬಂದ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಟ್ರಸ್ಟ್ ಮುಂದಾಯಿತು. ಪ್ರತಿ ಮನೆಯನ್ನು 1.45 ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1,357 ಮನೆ ನಿರ್ಮಾಣದ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಮಠಮಾನ್ಯಗಳು, ಉದ್ದಿಮೆದಾರರು, ಜನಸಾಮಾನ್ಯರು ಸೇವಾ ಭಾರತಿ ಟ್ರಸ್ಟ್ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ ಎಂದು ಹೇಳಿದರು.

ಶಾಸಕ ಶಿವನಗೌಡ ನಾಯಕ ಮಾತನಾಡಿ, ಸಂಕಷ್ಟದಲ್ಲಿರುವ ಜನತೆಗೆ ಸೇವಾ ಭಾರತಿ ಟ್ರಸ್ಟ್ ಧಾವಿಸಿ ಮನೆ ನಿರ್ಮಿಸಿರುವ ಕಾರ್ಯ ಸದಾ ಸ್ಮರಣೀಯ ಸಂಗತಿ ಎಂದು ಪ್ರಶಂಶಿಸಿದರು.

ಕರ್ನಾಟಕ ಸೇವಾ ಭಾರತಿ ಟ್ರಸ್ಟ್ ಉತ್ತರ ಪ್ರಾಂತೀಯ ಘಟಕದ ಅಧ್ಯಕ್ಷ  ಎಂ.ಎಸ್ ವೆಂಕಟೇಶ ಸಾಗರ ಅವರು ಪ್ರಾಸ್ತಾವಿಕ ಮಾತನಾಡಿದರು. ಪ್ರಭಾರ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್, ಸಹಾಯಕ ಆಯುಕ್ತ ಉಜ್ವಲ ಘೋಷ್, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ ಜೇರಬಂಡಿ, ತಾಪಂ ಅಧ್ಯಕ್ಷರು, ರಾಯಚೂರು ಸೇವಾ ಭಾರತಿ ಪ್ರಮುಖ ನಾಗನಗೌಡ ಮತ್ತಿತರರು ಉಪಸ್ಥಿತರಿದ್ದರು. ಮಸರಕಲ್ ಶಾಲೆ ಮಕ್ಕಳು ಪ್ರಾರ್ಥನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.