ADVERTISEMENT

ಆದಿಶೇಷನ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 9:20 IST
Last Updated 14 ಆಗಸ್ಟ್ 2012, 9:20 IST

ಸಿಂಧನೂರು: ಪ್ರತಿವರ್ಷದಂತೆ ಈ ಬಾರಿಯೂ ನಗರದ ಆರಾಧ್ಯದೈವ ಆದಿಶೇಷನ ಜಾತ್ರಾ ಮಹೋತ್ಸವವು ನೂರಾರು ಭಕ್ತಾದಿಗಳ ಮಧ್ಯೆ ಸೋಮವಾರ ಅದ್ಧೂರಿಯಾಗಿ ಜರುಗಿತು.

ಬೆಳಗ್ಗೆಯಿಂದ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು. ಸಂಜೆ 5ಗಂಟೆಗೆ ತಹಶೀಲ್ದಾರ ಕೆ.ನರಸಿಂಹ ನಾಯಕ ಉಚ್ಛಾಯಕ್ಕೆ ಚಾಲನೆ ನೀಡಿದರು. ದೇವಸ್ಥಾನದಿಂದ ಪ್ರಾರಂಭವಾದ ಉಚ್ಛಾಯ ಮೆರವಣಿಗೆ ತಹಶೀಲ್ದಾರ ಕಚೇರಿವರೆಗೆ ತೆರಳಿ ಪುನಃ ಮೂಲ ಸ್ಥಳಕ್ಕೆ ಆಗಮಿಸಿತು. ಮೆರವಣಿಗೆಯುದ್ಧಕ್ಕೂ ಡೊಳ್ಳು ಕುಣಿತ, ಭಜನೆ ಭಕ್ತಾದಿಗಳ ಗಮನ ಸೆಳೆಯಿತು.

ಜಾತ್ರೆಯ ನೇತೃತ್ವ ವಹಿಸಿದ್ದ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿ ಆದಿಶೇಷ ದೇವಸ್ಥಾನದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಕಾಳಜಿ ವಹಿಸಿ ಅನುದಾನ ಮಂಜೂರು ಮಾಡಿಸಬೇಕೆಂದು ಮನವಿ ಮಾಡಿದರು.

ADVERTISEMENT

ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ಬಿಎಸ್‌ಆರ್ ಪಕ್ಷದ ಮುಖಂಡ ಕೆ.ಕರಿಯಪ್ಪ, ಅಮರಯ್ಯಸ್ವಾಮಿ, ನಗರಸಭೆ ಸದಸ್ಯರಾದ ಕೆ.ಶರಣಪ್ಪ ತೆಂಗಿನಕಾಯಿ, ಎಸ್.ಶರಣೇಗೌಡ, ಚಂದ್ರು ಮೈಲಾರ, ಡಿ.ಎಸ್.ಕಲ್ಮಠ ವಕೀಲ, ಪಿಎಸ್‌ಐ ಲಿಂಗಪ್ಪ ಎನ್.ಆರ್., ಬಸವರಾಜ ಬಂಗಾರಶೆಟ್ಟರ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಹಂಪಯ್ಯಸ್ವಾಮಿ ರ‌್ಯಾವಿಹಾಳ, ವಿಶ್ವನಾಥ ಮಾಲಿಪಾಟೀಲ್, ಶಿವಕುಮಾರ ಜವಳಿ, ಅಜಿತ್ ಓಸ್ತವಾಲ್ ಮತ್ತಿತರರು ಉಚ್ಛಾಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.