ADVERTISEMENT

ಕರಡಕಲ್ಲ ಕೆರೆ ಅಭಿವೃದ್ಧಿಗೆ 10 ಕೋಟಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 9:20 IST
Last Updated 14 ಆಗಸ್ಟ್ 2012, 9:20 IST

ಲಿಂಗಸುಗೂರ: ಸ್ಥಳೀಯ ಪುರಸಭೆ ಆಡಳಿತ ವ್ಯಾಪ್ತಿಯ ಕಸಬಾಲಿಂಗಸುಗೂರ, ಲಿಂಗಸುಗೂರ ಹಾಗೂ ಕರಡಕಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ರೂ.5ಕೋಟಿ ಅನುದಾನ ಬಂದಿದೆ. ಅಲ್ಲದೆ, ಪ್ರವಾಸೋದ್ಯಮ ಮತ್ತು ಇತರೆ ಯೋಜನೆಗಳಡಿ ಕರಡಕಲ್ಲ ಕೆರೆ ಅಭಿವೃದ್ಧಿ ಪಡಿಸಿ ಸುಂದರ ತಾಣವನ್ನಾಗಿಸಲು ರೂ. 10ಕೋಟಿಗೆ ಶೀಘ್ರದಲ್ಲಿಯೆ ಅನುಮೋದನೆ ದೊರೆಯಲಿದೆ ಎಂದು ಶಾಸಕ ಮಾನಪ್ಪ ವಜ್ಜಲ ತಿಳಿಸಿದರು.

ಸೋಮವಾರ ಪುರಸಭೆ ಆಡಳಿತ ಮಂಡಳಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಸುಸಜ್ಜಿತ ಕಟ್ಟಡದ ಉದ್ಘಾಟನೆ ನಡೆಸಿರುವುದು ತಮಗೆ ಖಷಿ ತಂದಿದೆ. ಮುಂದಿನ ದಿನಗಳಲ್ಲಿ ಸರ್ವ ಸದಸ್ಯರು ಪಟ್ಟಣದ ಅಭಿವೃದ್ಧಿಯತ್ತ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು. ರಸ್ತೆ, ಕುಡಿಯುವ ನೀರು, ಚರಂಡಿ, ತ್ಯಾಜ್ಯ ವಸ್ತು ವಿಲೆವಾರಿ, ಬೀದಿ ದೀಪಗಳ ಸಮಸ್ಯೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಸಾಮೂಹಿಕವಾಗಿ ಪರಿಹರಿಸಲು ಮುಂದಾಗುವಂತೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಮಾನಪ್ಪ ವಜ್ಜಲ ಹಾಗೂ ಸಹಾಯಕ ಆಯುಕ್ತ ಟಿ. ಯೊಗೇಶ ಅವರನ್ನು ಆಡಳಿತ ಮಂಡಳಿ ಪರವಾಗಿ ಪುರಸಭೆ ಅಧ್ಯಕ್ಷೆ ದುರುಗಮ್ಮ ರಾಮಸ್ವಾಮಿ ಹಾಗೂ ಮುಖ್ಯಾಧಿಕಾರಿ ಈರಣ್ಣ ಬಿರಾದರ ಅವರು ಸನ್ಮಾನಿಸಿ ಗೌರವಿಸಿದರು. ಉಪಾಧ್ಯಕ್ಷೆ ಶಿವಜಾತಮ್ಮ ಕರಡಕಲ್ಲ. ಸ್ಥಾಯಿ ಸಮಿತಿ ಅದ್ಯಕ್ಷ ಮನೋಹರರೆಡ್ಡಿ ಮುನ್ನೂರು. ಸದಸ್ಯರಾದ ಖಾದರಪಾಷ, ಬಸವರಾಜ ಗುತ್ತೆದಾರ, ಸಾಲ್ಮನಿ ಕುಮಾರಸ್ವಾಮಿ, ಶಂಭುಲಿಂಗಪ್ಪ ಫುಲಭಾವಿ.

ADVERTISEMENT

ಅನೀಸಪಾಷ, ರಾಜು ಪಲ್ಲೇದ, ರುದ್ರಪ್ಪ ಬ್ಯಾಗಿ, ಫಯಾಜ್‌ಅಹ್ಮದ, ಶಿವರಾಜ ಬಾಳೆಗೌಡ್ರ, ಶಾಂತಮ್ಮ ಸೊಪ್ಪಿಮಠ, ರೇಖಾಬಾಯಿ, ಹುಲಿಗೆಮ್ಮ, ಚೋಟಿಮಾ, ಮಲ್ಲಮ್ಮ ಮಡ್ಡಿ, ಶರಣಗೌಡ ಪಾಟೀಲ, ತಿಮ್ಮಣ್ಣ ನಾಯಕ, ಕುಪ್ಪಣ್ಣ ಮುಂಡರಗಿ, ಗದ್ದೆಮ್ಮ, ನಾಮನಿರ್ದೇಶನ ಸದಸ್ಯರಾದ ಶರಣಪ್ಪ ನಾಯಕ, ಮಲ್ಲಿಕರ್ಜುನ ಮೇಲ್ಮನಿ, ಶರಣಗೌಡ ಮಾಲಿಪಾಟೀಲ, ಮಹ್ಮದಶರೀಫ್, ಜಯಶ್ರೀ ಸಕ್ರಿ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.