ADVERTISEMENT

ಚಿನ್ನದ ಗಣಿಯಲ್ಲಿ ಕಾರ್ಮಿಕರಿಂದ ಪೂಜೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 8:55 IST
Last Updated 7 ಅಕ್ಟೋಬರ್ 2011, 8:55 IST

ಹಟ್ಟಿ ಚಿನ್ನದ ಗಣಿ: ಮಹಾನವಮಿ ಅಂಗವಾಗಿ ಹಟ್ಟಿ ಚಿನ್ನದ ಗಣಿಯ ಎಲ್ಲಾ ವಿಭಾಗಗದ ಕಾರ್ಮಿಕರು ಶ್ರದ್ಧಾ ಭಕ್ತಿಯಿಂದ ಆಯುಧ ಪೂಜೆಯನ್ನು ನೆರವೇರಿಸಿದರು.

ಬುಧವಾರ ಬೆಳಿಗ್ಗೆ ಚಿನ್ನದ ಗಣಿಯ ಮಲ್ಲಪ ಶಾಫ್ಟ್‌ನಲ್ಲಿ ಭೂಕೆಳಮೈ ವಿಭಾದಗದ ಕಾರ್ಮಿಕರು ಆಯುಧ ಪೂಜೆ ಆಯೋಜಿಸಿದ್ದರು.

ಕಂಪೆನಿ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕ ಎಂ.ಎಲ್.ಪಾಟೀಲ್ ಪೂಜೆಯನ್ನು ಸಲ್ಲಿಸಿದರು. ನಂತರ ಪೂಜೆಗೆ ಆಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಬ್ಬದ ಶುಭಾಶಯ ಹೇಳಿದರು.  ಭೂ ಕೆಳಮೈವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಪ್ರಕಾಶ, ಹಿರಿಯ ವ್ಯವಸ್ಥಾಪಕ ಶಾಂತ ಕುಮಾರ, ಭೂ ಕೆಳಮೈ ವಿಭಾಗದ ಹಿರಿಯ ಅಧಿಕಾರಿಗಳಾದ ದೇಶಮುಖ್, ಮಧುಸುಧನ್, ಸುರೇಶಬಾಬು, ಸಂತೋಷ ಕುಮಾರ, ಕಾರ್ಮಿಕ ಸಂಘದ ಅಧ್ಯಕ್ಷ ಎಸ್.ಎಂ. ಶಫೀ, ಕಾರ್ಯದರ್ಶಿ ಅಮೀರ ಅಲಿ, ಉಪಾಧ್ಯಕ್ಷ ಅಮರಗುಂಡಪ್ಪ ನೆಲಗಿ, ಚಂದ್ರಶೇಖರ ಬಡಿಗೇರ, ರೇವಣಸಿದ್ದಪ್ಪ ಹಾಗೂ ಇತರ ಅಧಿಕಾರಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಕಿರಿಯ ಅಧಿಕಾರಿ ರೇವಣಸಿದ್ದಪ್ಪ ಹಾಗೂ ಪ್ರಕಾಶ ಹೆಸರೂರ ಅವರ ನೇತೃತ್ವದಲ್ಲಿ ಈ ಪೂಜಾ ಕಾರ್ಯಕ್ರಮ ನಡೆಯಿತು. ಕಂಪೆನಿಯ ಲೋಹ, ತಾಂತ್ರಿಕ, ಆಡಳಿತ ವಿಭಾಗಗಳು ಸೇರಿದಂತೆ ವಿಲೇಜ್ ಶಾಫ್ಟ್, ಸೆಂಟ್ರಲ್ ಶಾಫ್ಟ್, ಎಸ್ಟೇಟ್ ಆಫೀಸ್ ಹಾಗೂ ಕಂಪೆನಿಯ ಎಲ್ಲಾ ಉಪವಿಭಾಗಗಳಲ್ಲಿಯೂ ಸಹ ಕಾರ್ಮಿಕರು ಪೂಜೆ ಸಲ್ಲಿಸಿದರು.

ಹಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಇದೇ ಮೊದಲ ಬಾರಿಗೆ ಸಂಭ್ರಮದಿಂದ ಆಯುಧ ಪೂಜೆಯನ್ನು ಮಾಡಲಾಯಿತು. ಅಧ್ಯಕ್ಷರಾದ ಬಸವರಾಜ ಖಾನಾಪುರ, ಕಾರ್ಯದರ್ಶಿ ಬಸವರಾಜ ನಾಯಕ, ಉಪಾಧ್ಯಕ್ಷೆ ಶಾರದಾ ಪಾಟೀಲ್ ಸೇರಿದಂತೆ ಎಲ್ಲಾ ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು. ಹಟ್ಟಿ ಪೊಲೀಸ್ ಠಾಣೆಯಲ್ಲಿ ಸಹ ಆಯುಧ ಪೂಜೆಯನ್ನು ಸಲ್ಲಿಸಿದರು.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.