ADVERTISEMENT

ಚುನಾವಣೆ ವೆಚ್ಚ : ಜಿಲ್ಲೆಗೆ ಮೂವರು ವೀಕ್ಷಕರ ನೇಮಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 9:31 IST
Last Updated 13 ಏಪ್ರಿಲ್ 2013, 9:31 IST

ರಾಯಚೂರು: ಚುನಾವಣೆ ಆಯೋಗವು ಜಿಲ್ಲೆಯಲ್ಲಿ ಚುನಾವಣೆ (ವೆಚ್ಚದ) ವೀಕ್ಷಕರನ್ನಾಗಿ ಮೂವರನ್ನು ನೇಮಿಸಿದೆ.

ರಾಯಚೂರು ನಗರ ಹಾಗೂ ಗ್ರಾಮೀಣ ಕ್ಷೇತ್ರ ವೀಕ್ಷಕರಾಗಿ ವಿ.ಕೆ ಸಿಂಗ್, (ಮೊ- 9480067556) ಶಕ್ತಿನಗರ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಮಾನ್ವಿ, ದೇವದುರ್ಗ ವೀಕ್ಷಕರಾಗಿ ಆರ್.ಬಿ ಶಿಂಧೆ (ಮೊ- 9480072556) ಸರ್ಕಿಟ್ ಹೌಸ್ ರಾಯಚೂರಿನಲ್ಲಿ ವಾಸ್ತವ್ಯ  ಮಾಡುವರು. ಲಿಂಗಸುಗೂರು, ಸಿಂಧನೂರು, ಮಸ್ಕಿ ವೀಕ್ಷಕರಾಗಿ ಸಿ.ಆರ್ ಶರನ್ (ಮ್ೊ- 9480075556) ಸರ್ಕಿಟ್ ಹೌಸ್ ರಾಯಚೂರಿನಲ್ಲಿ ವಾಸ್ತವ್ಯ ಮಾಡಲಿದ್ದಾರೆ.

`ಆಮಿಷಕ್ಕೆ ಬಲಿಯಾದರೆ ಜೈಲಿಗೆ'
ರಾಯಚೂರು
: ಚುನಾವಣೆಯಲ್ಲಿ ಮತದಾರರಿಗೆ ನಗದು ಹಣ, ಮದ್ಯ ಹಾಗೂ ಕೊಡುಗೆ ಇನ್ನಿತರ ಸಾಮಗ್ರಿಗಳನ್ನು ಕೊಟ್ಟು ಆಮಿಷವೊಡ್ಡಿದವರಿಗೆ ಹಾಗೂ ಪಡೆದವರಿಗೂ 1 ವರ್ಷ ಜೈಲುವಾಸ ಹಾಗೂ ದಂಡವನ್ನು ವಿಧಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ್ ಎಚ್ಚರಿಕೆ ನೀಡಿದ್ದಾರೆ.

ದೂರುಗಳಿದ್ದಲ್ಲಿ ಸಾರ್ವಜನಿಕರು ದೂರು ನಿಯಂತ್ರಣ ಕಂಟ್ರೋಲ್ ರೂಂಗೆ ದೂರವಾಣಿ ಮೂಲಕ ತಿಳಿಸಬಹುದು. (ದೂ.ಸಂ.08532-226363).

ಅಕ್ರಮ ಮದ್ಯ: ತಂಡ ರಚನೆ
ರಾಯಚೂರು:
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಸೇಂದಿ, ಕಳ್ಳಭಟ್ಟಿ ಸರಾಯಿ, ಅಕ್ರಮ ಮದ್ಯ, ನಕಲಿ ಮದ್ಯ ಸಂಗ್ರಹ ತಯಾರಿಕೆ, ಸಾಗಾಣಿಕೆ ಹಾಗೂ ಹಂಚುವಂಥ ಚಟುವಟಿಕೆ ಮೇಲೆ ನಿಗಾ ಇಟ್ಟು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ನಗರದ ವಿಶೇಷ ಪೊಲೀಸ್ ಠಾಣೆ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗವು 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಿದೆ ಎಂದು ವಿಶೇಷ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರು ತಿಳಿಸಿದ್ದಾರೆ.

ಅಧಿಕಾರಿ ಮತ್ತು ಸಿಬ್ಬಂದಿ ಹೆಸರು ಮತ್ತು ಮೊಬೈಲ್ ಸಂಖ್ಯೆ ಈ ರೀತಿ ಇದೆ. ರವಿನಾಥ ಡಿ.ಎಚ್-ಪೊಲೀಸ್ ಇನ್ಸಪೆಕ್ಟರ್( ಮೊಬೈಲ್- 9449845039). ತಾಲ್ಲೂಕುವಾರು ಸಿಬ್ಬಂದಿ ಹೆಸರು ಮತ್ತು ಮೊಬೈಲ್ ಸಂಖ್ಯೆ ಈ ರೀತಿ ಇದೆ. ರಾಯಚೂರು ತಾಲ್ಲೂಕು- ಪಿ ನಾಗರಾಜ ( 9663879719), ರುದ್ರಪ್ಪ(9902093131), ರವೀಂದ್ರ(9900211525), ಎಚ್ ರಂಗಪ್ಪ ( 9945881942), ತಿಮ್ಮಪ್ಪ( 9901771288), ಶ್ರೀರಾಮರೆಡ್ಡಿ(9632789076).

ಮಾನ್ವಿ ತಾಲ್ಲೂಕು-ಸಿದ್ದಯ್ಯ (9900857614), ಸಿಂಧನೂರು ತಾಲ್ಲೂಕು- ಹುಲಿಯಪ್ಪ (9449689981), ಮಹಬೂಬ ಅಲಿ (9886344151), ದೇವದುರ್ಗ ತಾಲ್ಲೂಕು- ಜಿಂದಾವಲಿ (9008055230), ನೂರಾ ನಾಯ್ಕ (7353839338),  ಲಿಂಗಸುಗೂರು ತಾಲ್ಲೂಕು- ಕುಮಾರಸ್ವಾಮಿ  (9886560195).  ಈ ಸಿಬ್ಬಂದಿ ಮತ್ತು ಅಧಿಕಾರಿಗೆ ಸಾರ್ವಜನಿಕರು ಮಾಹಿತಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.