ADVERTISEMENT

`ಛೋಲೊ ನೀರ್ ಕೊಡಸಬೇಕ್ರಿ...

ಪೊಲೀಸನ ಹೆಂಡ್ತಿಗೆ ಒಲಿದ ನಗರಸಭೆ ಅಧ್ಯಕ್ಷ ಸ್ಥಾನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 6:00 IST
Last Updated 7 ಸೆಪ್ಟೆಂಬರ್ 2013, 6:00 IST

ರಾಯಚೂರು:  ನಗರದ ಬಡಾವಣೆಯಲ್ಲಿನ ಕಸ, ಚರಂಡಿ ಸ್ವಚ್ಛಗೊಳಿಸಬೇಕು, ರಸ್ತೆ ರಿಪೇರಿ ಮಾಡಸಬೇಕ್ರಿ.. ವಿದ್ಯುತ್ ಕೊಡಬೇಕಿ, ಮುಖ್ಯವಾಗಿ ಛೋಲೊ ನೀರ್ ಕೊಡಸಬೇಕ್ರಿ...ಇದನ್ನಷ್ಟ ಮಾಡಿದ್ರ ಸಾಕು ಊರಿನ ಜನ್ರಿಗೆ ಎಷ್ಟೋ ಅನುಕೂಲ ಆಗ್ತದ...

ಇದು ರಾಯಚೂರು ನಗರಸಭೆಗೆ ಶುಕ್ರವಾರ ನೂತನ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಗೊಂಡ ಮಹಾದೇವಿ ಅವರ ಪತಿ ಹಾಗೂ ದೇವದುರ್ಗ ತಾಲ್ಲೂಕು ಜಾಲಹಳ್ಳಿ ಪೊಲೀಸ್ ಠಾಣೆ ಹೆಡ್ ಕಾನ್ಸಟೇಬಲ್ ತಾಯಣ್ಣ ನಾಯಕ ಅವರು ನಗರದ ಜನತೆ ಪರವಾಗಿ ನೂತನ ಅಧ್ಯಕ್ಷೆ ಮತ್ತು ಅವರ ಪತ್ನಿ ಮಹಾದೇವಿ ಅವರಿಗೆ ವ್ಯಕ್ತಪಡಿಸಿದ ಅಹವಾಲು ತಮ್ಮ ಪತ್ನಿ ನಗರಸಭೆ ಸದಸ್ಯಳಾಗುತ್ತಾಳೆ, ಹೀಗೆ ಅಧ್ಯಕ್ಷೆಯೂ ಆಗಿಬಿಡುತ್ತಾಳೆ ಎಂದು ತಾವು ನಿರೀಕ್ಷೆ ಮಾಡಿರಲಿಲ್ಲ.

6ನೇ ವಾರ್ಡ್ ಜನತೆ ಅಭಿಮಾನದಿಂದ ಚುನಾವಣೆ ಕಣಕ್ಕೆ ನಿಲ್ಲಿಸಿ ಗೆಲ್ಲಿಸಿದರು. ಈಗ ಅಧ್ಯಕ್ಷ ಹುದ್ದೆ `ಎಸ್‌ಟಿ'ಗೆ ಮೀಸಲಾತಿ ನಿಗದಿಗೊಂಡು ಘೋಷಣೆಯಾಗಿದ್ದರಿಂದ ಎಸ್‌ಟಿ ಸಮುದಾಯಕ್ಕೆ ಸೇರಿದ್ದರಿಂದ ಈ ಹುದ್ದೆ ಅವರಿಗೆ ದೊರಕಿದ್ದು ಸಂತೋಷ ತಂದಿದೆ ಎಂದರು.

ಅಧಿಕಾರದಲ್ಲಿ ಇರುವಷ್ಟು ದಿನ ಜನತೆಗೆ ಅನುಕೂಲ ಹಾಗೂ ಜನರ ಸಂಕಷ್ಟ ಬಗೆಹರಿಸಿ ಕೆಲಸ ಮಾಡಿ ನಗರ ಅಭಿವೃದ್ಧಿಗೆ ಪ್ರಯತ್ನಿಸುವಂತೆ ತಾವು ನೂತನ ಅಧ್ಯಕ್ಷರಿಗೆ ಸಾರ್ವಜನಿಕರ ಪರವಾಗಿ ಮನವಿ ಮಾಡುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.