ADVERTISEMENT

`ದಾಸ ಸಾಹಿತ್ಯ ಶ್ರೀಮಂತಗೊಳಿಸಿದ ಕನಕದಾಸ'

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:59 IST
Last Updated 26 ಡಿಸೆಂಬರ್ 2012, 5:59 IST

ಜಾಲಹಳ್ಳಿ: ರಾಜ್ಯದ ಜನಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿರುವ ಹಾಲುಮತ ಸಮಾಜದ ಇತಿಹಾಸ ಬಹಳ ಪ್ರಾಚೀನವಾದದ್ದಾಗಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.

ಅವರು ಇಲ್ಲಿಗೆ ಸಮೀಪದ ಚಿಂಚೋಡಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ 525ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದರು. ಹಾಲುಮತ ಸಮಾಜದಲ್ಲಿ ಹುಟ್ಟಿದ ಕನಕದಾಸರು ದಾಸ ಸಾಹಿತ್ಯ ಶ್ರೀಮಂತಗೊಳಿಸಿದರು. ಗುಲ್ಬರ್ಗ ವಿಭಾಗದ ಕನಕಗುರು ಪೀಠಕ್ಕೆ 1 ಕೋಟಿ 40 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದಾಗಿ ಅವರು ತಿಳಿಸಿದರು.

ಇದಕ್ಕೂ ಮೊದಲು ಗ್ರಾಮದಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಿ ನೂತನ  ಕನಕದಾಸರ ವೃತ್ತ ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಕಾಗಿನೆಲೆ ಕನಕಗುರುಪೀಠದ ಸಿದ್ದರಾಮಾನಂದ ಸ್ವಾಮಿ, ಕಕ್ಕೇರಿಯ ನಂದಣ್ಣ ತಾತಾ, ಗೊಲಪಲ್ಲಿಯ ವಾಲ್ಮೀಕಿ ಪೀಠದ ವರದಯ್ಯ ತಾತಾ, ಮುಂಡರಗಿ ಸಿದ್ದಣ್ಣ ತಾತಾ ವಹಿಸಿದ್ದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಿಎಸ್ ಪಾಟೀಲ್, ತಾಲ್ಲೂಕು ಎಪಿಎಂಸಿ ಅಧ್ಯಕ್ಷ ಸುರೇಶ ಎಲಿ, ಮಾಜಿ ಜಿ.ಪಂ ಸದಸ್ಯ ಹೆಚ್‌ಪಿ ಬಸವರಾಜ, ಸಮಾಜದ ಮುಖಂಡರಾದ ಲಕ್ಕಪ್ಪಗೌಡ, ಚಂದಪ್ಪ ಬುದ್ದಿನ್ನಿ, ಸಂಗಣ್ಣ ಬಯ್ಯಾಪುರು, ಲಿಂಗಣ್ಣ ಚಿಂಚೋಡಿ, ಬಿಜೆಪಿ ಮುಖಂಡ ಆರ್.ಎಸ್.ಪಾಟೀಲ್, ವೀರಣ್ಣ ಪಾಣಿ, ಜಗನ್ನಾಥರಾಯ ಪಾಟೀಲ್, ಈರಣ್ಣ ಬಳೆ, ಅಮರೇಶ ಪಾಟೀಲ್, ಭೀಮಣ್ಣ ನಾಡಗೌಡ, ಆದನಗೌಡ ಪಾಟೀಲ್, ಭೂತಪ್ಪ ದೇವರಮನಿ ಇದ್ದರು. ಪಂಪಾಪತಿ ಮತ್ತು ಗೋವಿಂದರಾಯ ಚಿಂಚೋಡಿ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.