ಲಿಂಗಸುಗೂರ: ಶಾಲಾ ಕಾಲೇಜು ಆರಂಭಗೊಂಡಾಗಿನಿಂದ ಜಾತಿ, ಆದಾಯ, ವಾಸಸ್ಥಳ ಸೇರಿದಂತೆ ಶಿಕ್ಷಣ ಇಲಾಖೆ ಕೇಳುವ ಇತರೆ ಅಗತ್ಯ ದಾಖಲೆಗಳ ಪ್ರಮಾಣಪತ್ರ ಪಡೆಯುವುದು ಶಾಲಾ ಕಾಲೇಜು ಮಕ್ಕಳಿಗೆ ಸವಾಲಾಗಿದೆ. ಪಾಲಕರ ಸಮೇತ ಮಕ್ಕಳು ಖುದ್ದು ತಹಶೀಲ್ದಾರ ಕಚೇರಿಗೆ ಬಂದರೂ ಕೂಡ ಪ್ರಮಾಣ ಪತ್ರಗಳು ದೊರಕುತ್ತಿಲ್ಲ ಎಂದು ಪಾಲಕ ಚಂದ್ರಶೇಖರ ಬೇಸರ ವ್ಯಕ್ತಪಡಿಸಿದರು.
ಕಳೆದ 15 ದಿನಗಳ ಹಿಂದೆಯೆ ನೆಮ್ಮದಿ ಕಂಪ್ಯೂಟರ್ ಕೇಂದ್ರಗಳಲಿ ಅರ್ಜಿ ಸಲ್ಲಿಸಲಾಗಿದೆ. ಗುರುಗುಂಟಾ, ಹಟ್ಟಿ, ಲಿಂಗಸುಗೂರ, ನಾಗರಹಾಳ, ನಾಗಲಾಪುರ, ಮುದಗಲ್ಲ ಭಾಗದ ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರ ಪಂಚನಾಮೆ ವರದಿ ಖದ್ದು ತಂದಿದ್ದರು ಕೂಡ ತಹಶೀಲ್ದಾರ ಕಚೇರಿಯಲ್ಲಿ ಸಹಿ ಆಗುತ್ತಿಲ್ಲ ಎಂದು ಶಾಲಾ ಮಕ್ಕಳು ಆರೋಪಿಸಿದರು.
ಸಾಕಷ್ಟು ಕಷ್ಟ ಪಟ್ಟು ಇಲಾಖೆ ಮೂಲಕ ಆಗಬೇಕಾದ ಎಲ್ಲಾ ಕಾನೂನಾತ್ಮ ಪ್ರಕ್ರಿಯೆಗಳನ್ನು ಮಾಡಿಕೊಟ್ಟಾಗ್ಯೂ ಕೂಡ ತಹಶೀಲ್ದಾರರ ಅಧಿಕಾರ ಗೊಂದಲ ತಮ್ಮನ್ನು ಇನ್ನಷ್ಟು ಗೊಂದಲ್ಲಕ್ಕೆ ಸಿಲುಕಿಸಿದೆ. ಗ್ರೇಡ್-1 ಮತ್ತು ಗ್ರೇಡ್-2 ತಹಶೀಲ್ದಾರರಿದ್ದು ಯಾರು? ಯಾವ? ದಾಖಲೆ ಸಹಿ ಮಾಡಬೇಕು ಎಂಬ ಗೊಂದಲದಿಂದ ಯಾವೊಂದು ಪ್ರಮಾಣಪತ್ರಗಳು ಸಹಿ ಆಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳಿಂದ ಮರು ಪರಿಶೀಲನೆಗೆ ಬಂದ ಪ್ರಮಾಣಪತ್ರಗಳ ಮೂಲ ದಾಖಲೆಗಳು ಕಚೇರಿಯಲ್ಲಿ ದೊರಕುತ್ತಿಲ್ಲ. ಪರಿಶೀಲನಾ ವರದಿ ನೀಡುವಂತೆ ವಿದ್ಯಾರ್ಥಿಗಳು ಅಲೆದಾಡಿದರು ಕೂಡ ಈ ಮುಂಚೆ ಪ್ರಮಾಣಪತ್ರ ನೀಡಿದಾಗಿನ ಮೂಲ ದಾಖಲೆಗಳು ಸಿಕ್ಕರೆ ಮಾತ್ರ ಬರೆದುಕೊಡುವುದಾಗಿ ಹೇಳಿಕೊಳ್ಳುತ್ತಿರುವುದು ಮಕ್ಕಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಶೀಘ್ರ ನ್ಯಾಯ ದೊರಕದೆ ಹೋದಲ್ಲಿ ಹೋರಾಟ ಮಾಡುವುದಾಗಿ ಎಸ್‌ಎಫ್‌ಐ ಮತ್ತು ಎಬಿವಿಪಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.