ADVERTISEMENT

ಬೀಜ, ರಸಗೊಬ್ಬರ ಕೊರತೆಯಾಗದಿರಲಿ

ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 8:54 IST
Last Updated 19 ಮೇ 2018, 8:54 IST

ರಾಯಚೂರು: ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿ ಚಟುವಟಿಕೆ ನಡೆಸಲು ರೈತರಿಗೆ ಸಕಾಲಕ್ಕೆ ಬೀಜ ಹಾಗೂ ರಸಗೊಬ್ಬರ ಕೊರತೆಯಾಗದಂತೆ ರಿಯಾಯಿತಿ ದರದಲ್ಲಿ ವಿತರಣೆ ಮಾಡಬೇಕು. ರಿಯಾಯಿತಿ ದರದ ಬೀಜ ಹಾಗೂ ರಸಗೊಬ್ಬರ ಉಳ್ಳವರ ಪಾಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ADVERTISEMENT

2018–19ನೇ ಸಾಲಿಗೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 3,50,551 ಹೆಕ್ಟೇರ್ ಪ್ರದೇಶ ಬಿತ್ತನೆಯಾಗುವ ನಿರೀಕ್ಷೆಯಿದ್ದು, 38,859 ಕ್ವಿಂಟಲ್ ಬೀಜದ ಬೇಡಿಕೆಯಿದೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ, ರಾಷ್ಟ್ರೀಯ ಬೀಜ ನಿಗಮ ಹಾಗೂ ಇತರೆ ಖಾಸಗಿ ಸಂಸ್ಥೆಗಳಲ್ಲಿ ಎಲ್ಲಾ ತಳಿಯ ಬೀಜಗಳು ಲಭ್ಯವಿದ್ದು, ಯಾವುದೇ ಕೊರತೆ ಆಗುವುದಿಲ್ಲ ಎಂದರು.

ಪರಿಶಿಷ್ಟ ಜಾತಿ ಹಗೂ ಪರಿಶಿಷ್ಟ ಪಂಗಡ ರೈರಿಗೆ ಶೇಕಡಾ 75ರಷ್ಟು, ಸಾಮಾನ್ಯ ರೈತರಿಗೆ ಶೇಕಡಾ 50 ರಷ್ಟು ರಿಯಾಯತಿ ದರದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಸಗೊಬ್ಬರಕ್ಕೆ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ಕಚೇರಿಯಿಂದ ಅಗತ್ಯ ಕ್ರಮ ಜರುಗಿಸಿದ್ದು, ಜಿಲ್ಲೆಯಲ್ಲಿ ಯಾವೂದೇ ರಸಗೊಬ್ಬರ ಕೊರತೆಯಿಲ್ಲ ಎಂದರು.

ಜಿಲ್ಲೆಯಲ್ಲಿ 2018–19ನೇ ಸಾಲಿನಲ್ಲಿ 85 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯುವ ನಿರೀಕ್ಷೆಯಿದ್ದು, ಅಗತ್ಯ ಪ್ರಮಾಣದ ಬೀಜ ಸರಬರಾಜು ಮಾಡಲಾಗುತ್ತಿದೆ.

ಒಟ್ಟು 3,40,000 ಪಾಕೇಟ್‌ ಬೇಕಾಗಿದ್ದು ಮುಂಗಾರು ಹಂಗಾಮಿಗೆ 4,18,250 ಪ್ಯಾಕೇಟ್ ಸರಬರಾಜು ಮಾಡಲಾಗುತ್ತಿದೆ. ಪಾಕೇಟ್‌ ಮೇಲೆ ಬಿಟಿ-1 ಮತ್ತು ಬಿಟಿ-2 ಎಂದು ನಮೂದಿಸಲಾಗಿರುತ್ತದೆ. ಬಿಟಿ-1ರ ಬೆಲೆ ₹ 635 ಮತ್ತು ಬಿಟಿ-2ರ ಬೆಲೆ ₹240 ಇದೆ.

ಅನುಮೋದಿತ 30 ಸಂಸ್ಥೆಗಳಿಂದ ಮಾತ್ರ ಖರೀದಿ ಮಾಡಬೇಕು. ಅನಧಿಕೃತ ಬೀಜ ಮಾರಾಟದ ಸುಳಿವು ತಿಳಿದುಬಂದರೆ ಕೂಡಲೇ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಲು ಮಾಹಿತಿ ನೀಲಾಗಿದೆ ಎಂದು ಅವರು ತಿಳಿಸಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಅಬೀದ, ಸಹಾಯಕ ಕೃಷಿ ನಿರ್ದೇಶಕ ನಸೀರ ಅಹ್ಮದ, ರಕ್ಕಸಗಿ, ಮುಜಬೂರ ರೆಹಮಾನ, ಸುಧಾ ಮಾಡಲಗೇರಿ, ರೆಹಮಾನ ಜಾಲಿಹಾಳ, ಉಮಾದೇವಿ ಕರಿಗಾರ ಇದ್ದರು.

**
ರೈತ ಸಂಪರ್ಕ ಕೇಂದ್ರಗಳಿಂದ ಜೂನ್‌ ಮೊದಲನೇ ವಾರದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯನ್ನು ಪ್ರಾರಂಭಿಸಲಾಗುವುದು
- ಚೇತನಾ ಪಾಟೀಲ,ಜಂಟಿ ನಿರ್ದೇಶಕಿ, ಕೃಷಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.